Homecultureರಾಜವಾಡೆಯಲ್ಲಿ ಸಂಭ್ರಮದ ಮೊಹರಂ ಹಬ್ಬ

ರಾಜವಾಡೆಯಲ್ಲಿ ಸಂಭ್ರಮದ ಮೊಹರಂ ಹಬ್ಬ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವರುಗಳನ್ನು ಕೊನೆಯ ದಿನವಾದ ಬುಧವಾರ ಸಹಸ್ರಾರು ಹಿಂದೂ-ಮುಸ್ಲಿಂ ಸದ್ಭಕ್ತರು ಸಂಭ್ರಮದಿಂದ ಮೆರವಣಿಗೆ ನಡೆಸುವ ಮೂಲಕ ಮೊಹರಂ ಹಬ್ಬಕ್ಕೆ ವಿದಾಯ ಹೇಳುವ ಮುನ್ನ, ಬೆಳಿಗ್ಗೆ ಇಲ್ಲಿನ ರಾಜವಾಡೆಯಲ್ಲಿ ಪರಸ್ಪರ ಬೇಟಿ ಮಾಡುವ ಮೂಲಕ ಸಂಭ್ರಮದ ಮೆರವಣಿಗೆ ನಡೆಸಿದರು.

ಮುಂಜಾನೆ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ ದೇವರುಗಳನ್ನು ಹೊತ್ತು ಪರಸ್ಪರ ಭೇಟಿ ನೀಡುತ್ತಾ, ಇಲ್ಲಿನ ರಾಜವಾಡೆಯಲ್ಲಿ ಸೇರಿ ಭಕ್ತರಿಂದ ವಿಶೇಷ ಪೂಜೆಗೈದು ಪುನಃ ಮಸೀದಿಗಳಿಗೆ ತೆರಳಿದರು. ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವರುಗಳನ್ನು ಹೊತ್ತುಕೊಂಡು ಮೆರವಣಿಗೆ ನಡೆಸಿ ಹೆಜ್ಜೆ ಕುಣಿತ, ಕೋಲಾಟ, ಬಾಜಿ ಭಜೇಂತ್ರಿಗಳೊಂದಿಗೆ ಸಂತಸ ಸಂಭ್ರಮದಿಂದ ಮೊಹರಂ ಹಬ್ಬವನ್ನು ಆಚರಿಸಿ, ಕೊನೆಗೆ ಹಬ್ಬಕ್ಕೆ ವಿದಾಯ ಹೇಳಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img