ವಿಜಯಪುರ: ಗಲಾಟೆಗೆ ಸಂಬಂಧಿಸಿದ ಆರೋಪಿಗಳಿಗೆ ಸ್ಟೇಷನ್ ಬೇಲ್ ನೀಡೋ ವಿಚಾರದಲ್ಲಿ ಆರೋಪಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಜಯಪುರ ನಗರದ ಗೋಲಗುಂಬಜ್ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಸ್ಟೇಬಲ್ಸ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹನುಮಂತ ಪೂಜಾರಿ, ಜಟ್ಟೆಪ್ಪ ಬಿರಾದಾರ್ ಲೋಕಾ ಬಲೆಗೆ ಬಿದ್ದವರಾಗಿದ್ದು,
50 ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟು 40 ಸಾವಿರ ನಗದು ಲಂಚ ಪಡೆದಿದ್ದರು. ಲೋಕಾಯುಕ್ತ ಎಸ್ಪಿ ಟಿ ಮಲ್ಲೇಶ, ಡಿವೈಎಸ್ಪಿ ಸುರೇಶ ರೆಡ್ಡಿ ಇನ್ಸ್‌ಪೆಕ್ಟರ್ ಆನಂದ ಠಕ್ಕನವರ, ಎ ಎ ಡೋಣಿ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಕಾನ್ ಸ್ಟೇಬಲ್ ರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



