ದಕ್ಷಿಣ ಕನ್ನಡ:- ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೀಟು ಬಳಿ ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಬೋಲೆರೊ ವಾಹನ ಚಲಾಯಿಸಿ ಬೈಕ್ಗೆ ಡಿಕ್ಕಿ ಹೊಡೆದಿದ್ದು, 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.
ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಗಾನವಿ ಪುತ್ರಿಯಾದ ಅನರ್ಘ್ಯ ಮೃತ ಬಾಲಕಿ. ಇನ್ನು ಅಪಘಾತ ಬಳಿಕ ವಾಹನ ಸಮೇತ ಪರಾರಿಯಾಗುತ್ತಿದ್ದವರನ್ನು ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಸ್ಥಳೀಯರು ಹಿಡಿದಿದ್ದಾರೆ
ಇನ್ನು ಮೃತ ಅನರ್ಘ್ಯ, ಉಜಿರೆ ಎಸ್ಡಿಎಂ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಡಿಕ್ಕಿ ಹೊಡೆದ ಬೋಲೆರೊ 30 ಮೀಟರ್ ಎಳೆದುಕೊಂಡು ಹೋಗಿದೆ. ಪರಿಣಾಮ ಸ್ಥಳದಲ್ಲೇ ಅನರ್ಘ್ಯ ಕೊನೆಯುಸಿರೆಳೆದಿದ್ದಾಳೆ.
ಅಪಘಾತ ಬಳಿಕ ಬೋಲೆರೊ ವಾಹನ ಸಮೇತ ಪರಾರಿ ಆಗ್ತಿದ್ದ ನಾಲ್ವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಈ ವೇಳೆ ಓರ್ವ ಎಸ್ಕೇಪ್ ಆಗಿದ್ದಾನೆ.