ಬೆಂಗಳೂರು:– ನಗರದಲ್ಲಿ ಇತ್ತೀಚೆಗೆ ತಲೆ ಎತ್ತಿರುವ ಫ್ಲೆಕ್ಸ್ ಮತ್ತು ಬ್ಯಾನರ್ ಸಂಪೂರ್ಣ ಬ್ಯಾನ್ ಮಾಡಲಾಗಿದೆ ಎಂದು ಕಮಿಷನರ್ ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಜೊತೆ ಸಭೆ ನಡೆಸಿ ಮಾತನಾಡಿದ ಪೊಲೀಸ್ ಕಮಿಷನರ್, ‘ಫ್ಲೆಕ್ಸ್, ಬ್ಯಾನರ್ಗಳ ಅಳವಡಿಕೆ ವಿರುದ್ಧ ಯಾವ ರೀತಿ ಕಾರ್ಯಾಚರಣೆ ಮಾಡಬೇಕೆಂಬ ನಿರ್ಧಾರ ಮಾಡಲಾಗಿದೆ. ಅಕ್ರಮ ಚಟುವಟಿಕೆಗಳ ಮಟ್ಟಹಾಕಲು ಚರ್ಚೆ ಮಾಡಲಾಗಿದೆ ಎಂದರು.
ಅನಧೀಕೃತ ಬ್ಯಾನರ್ಗಳ ತೆರವಿಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಚರಣೆ ನಡೆಸಲಿದ್ದು, ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ಗಳನ್ನು ಪೊಲೀಸರು ತೆರೆವುಗೊಳಿಸಲಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ‘ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಲಿದ್ದು, ದೂರು ಬಂದ ತಕ್ಷಣವೇ ಪೊಲೀಸರು, ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ ತೆರವು ಕಾರ್ಯ ನಡೆಸಲಿದ್ದಾರೆ.
ಇನ್ನು ಸಭೆಯಲ್ಲಿ ಎರಡು ಅಂಶಗಳ ಮಹತ್ವದ ಚರ್ಚೆಯಾಗಿದೆ. ಮೊದಲನೆದಾಗಿ ಎಲ್ಲೆಲ್ಲಿ ಅನಧಿಕೃತ ಫ್ಲೆಕ್ಸ್ ಹಾಕಲಾಗಿದೆ, ಅವುಗಳ ತೆರವು ಹಾಗೂ ಕ್ರಮಕೈಗೊಳ್ಳುವುದು. ಹಾಗೂ ಪ್ರಮುಖವಾಗಿ ಯಾವ ಯಾವ ಕಾನೂನು ಕ್ರಮ ಕೈಗೊಳ್ಳಬಹುದು. ಅವೆಲ್ಲವನ್ನೂ ಬಳಸಿ ಕ್ರಮ ಕೈಗೊಳ್ಳಲಾಗುತ್ತದೆ. ಎರಡನೇದಾಗಿ ಈ ರೀತಿ ಫ್ಲೆಕ್ಸ್ ಗಳ ಹಾಕದಂತೆ ನಿಗಾ ವಹಿಸುವುದು. ರಾತ್ರಿ ಗಸ್ತಿನಲ್ಲಿರುವ ಸಿಬ್ಬಂದಿಗಳಿಗೂ ಸಹ ಸೂಚನೆ ನೀಡಲಾಗಿದೆ.
ಫ್ಲೆಕ್ಸ್ ಹಾಕುವ ವೇಳೆ ಅದನ್ನು ಪೂರ್ವ ನಿರ್ಧರಿತ ನಂಬರ್ಗೆ ಮಾಹಿತಿ ನೀಡುವುದು. ಅವುಗಳ ಮೇಲೆ ಎಫೆಕ್ಟಿವ್ ಆಕ್ಷನ್ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.