“X” ನಲ್ಲಿ ಎಸಿಪಿಗೆ ಬೆದರಿಕೆ ಹಾಕಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು!

0
Spread the love

ಬೆಂಗಳೂರು:- X” ನಲ್ಲಿ ಎಸಿಪಿಗೆ ಬೆದರಿಕೆ ಹಾಕಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಾಗಿದೆ. ಆಮ್ ಆದ್ಮಿ ಯುವ ಘಟಕದ ಅಧ್ಯಕ್ಷ ಜಿ.ಹೆಚ್.ಲೋಹಿತ್ ಕುಮಾರ್ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಂಸದರ ವಿರುದ್ಧ ದೂರು ದಾಖಲಿಸಿದ್ದಾರೆ.

Advertisement

ಎಸಿಪಿ ಚಂದನ್‌ಗೆ ಟ್ವಿಟರ್ ಮೂಲಕ ಬೆದರಿಕೆ ಹಾಕಿರುವ ಆರೋಪದ ಮೇಲೆ ದೂರು ದಾಖಲಾಗಿದೆ.

ಪುನೀತ್ ಕೆರೆಹಳ್ಳಿಯನ್ನು ಠಾಣೆಯಲ್ಲಿ ಬೆತ್ತಲೆ ಮಾಡಿ ಮಾಡಿದ್ದಾರೆ ಎಂಬ ಮಾಹಿತಿ ಮೇಲೆ ಎಸಿಪಿ ಚಂದನ್ ಅವರಿಗೆ ಪೊಲೀಸ್ ಠಾಣೆಗೆ ನಾನು ಬರ್ತಿದ್ದೇನೆ , ನೀನು ಇರು ಎಂದು ಟ್ವಿಟರ್ ಮೂಲಕ ಪ್ರತಾಪ್ ಸಿಂಹ ಬೆದರಿಕೆ ಹಾಕಿರುತ್ತಾರೆ.

ಮಾಜಿ ಸಂಸದರ ಟ್ವೀಟ್ ರಾಜ್ಯದ ಕಾನೂನು ಹಾಗೂ ಪೊಲೀಸ್ ಇಲಾಖೆ ಮೇಲಿಟ್ಟಿರುವ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಯಾವುದೇ ದಾಖಲೆ ಇಲ್ಲದಿದ್ದರೂ ರಾಜಕೀಯ ಉದ್ದೇಶದಿಂದ ಟ್ವೀಟ್ ಮಾಡಿದ್ದಾರೆ. ಕೂಡಲೇ‌ ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here