ಬಾಗಲಕೋಟೆ: ಇಬ್ಬರು ಪ್ರೇಮಿಗಳು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಂದಗಾವ ಗ್ರಾಮದಲ್ಲಿ ನಡೆದಿದೆ.
Advertisement
ಸಚಿನ್ ( 22) ಪ್ರಿಯಾ ( 19) ಮೃತ ದುರ್ಧೈವಿಗಳಾಗಿದ್ದು, ಸಚಿನ್ ಮತ್ತು ಪ್ರೀಯಾ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು ಮದುವೆಗೆ ಮನೆಯವರು ನಿರಾಕರಿಸಿದ್ದಕ್ಕೆ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಮತ್ತೇನಾದರೂ ಕಾರಣ ಇದೆಯಾ ಎಂಬುದು ಮಾಹಲಿಂಗಪುರ ಪೊಲೀಸರ ತನಿಖೆ ನಂತರ ತಿಳಿಯಲಿದೆ. ಇನ್ನೂ ಘಟನೆ ಸಂಬಂಧ ಮಾಹಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.