ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ರೈಲ್ವೆ ನಿಲ್ದಾಣ ಬಳಿ ಲವ್ ಬ್ರೇಕ್ ಅಪ್ʼ ನಿಂದ ನೊಂದು ಯುವತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಡಾರ್ಜಿಲಿಂಗ್ ಮೂಲದ ಲಿಖಿತ ಜಾಸ್ಮೀನ್(24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಅಕ್ಕ ಕೃತಿಕ ಜಾಸ್ಮೀನ್ ಮನೆಗೆ ಬಂದಿದ್ದ ಯುವತಿ ಇಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗಾಗಿ ಲವ್ ಬ್ರೇಕ್ ಅಪ್ ಆಗಿತ್ತು. ಇದರಿಂದ ಲಿಖಿತ ಜಾಸ್ಮೀನ್ ಮನನೊಂದಿದ್ದಳು. ಸಾಯುವ ಬಗ್ಗೆ ಮಾತಗಳನ್ನಾಡುತ್ತಿದ್ದಳು. ತಂಗಿ ಒಬ್ಬಳೇ ಇದ್ದರೆ ಏನಾದ್ರು ಮಾಡಿಕೊಳ್ಳುತ್ತಾಳೆಂದು ಭಯಪಟ್ಟು ಲಿಖಿತ ಅಕ್ಕ ಕೃತಿಕ ತಂಗಿಯ ನೋವು ಮರೆಸುವ ಸಲುವಾಗಿ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿದ್ದ ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿಕೊಂಡಿದ್ದರು.
ಆದರೆ ಇಂದು ಬೆಳಿಗ್ಗೆ 9ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮನೆಯಿಂದ ಆಚೆ ಬಂದ ಲಿಖಿತ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೈಲ್ವೆ ಪೊಲೀಸರು ಸ್ಥಳ ಮಹಜರು ಕಾರ್ಯ ನಡೆಸಿದ್ದು, ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.