ಆಂಟಿ ಬಂದ್ಲು ಆಂಟಿ: ಮದುವೆ ಆಗೋಕೆ ಹುಡುಗಿ ಹುಡುಕ್ತಿದ್ದೀರಾ!?, ಹುಡುಗರೇ ನೀವು ಈ ಸುದ್ದಿ ನೋಡಲೇಬೇಕು!

0
Spread the love

ತುಮಕೂರು:– ಹುಡುಗರೇ ಮದುವೆ ಆಗೋಕೆ ಹುಡುಗಿ ಹುಡುಕ್ತಿದ್ದೀರಾ!?, ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ.

Advertisement

ಇತ್ತೀಚಿನ ದಿನಗಳಲ್ಲಿ ಕನ್ಯೆ ಸಿಗದೇ ಅದೆಷ್ಟೋ ಮಂದಿ ಮದುವೆಯಾಗದೇ ಸಿಂಗಲ್ಲಾಗಿಯೇ ಉಳಿದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರ ತಂಡವೊಂದು ಹುಟ್ಟಿಕೊಂಡಿದ್ದು, ವಂಚನೆ ಮಾಡುತ್ತಿರುವುದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದ ಪಾಲಾಕ್ಷಯ್ಯಗೆ 37 ವರ್ಷದ ಮಗನಿದ್ದಾನೆ. ಇಡೀ ಕರ್ನಾಟಕ ಸುತ್ತಾಡಿದರೂ ಮಗ ದಯಾನಂದಮೂರ್ತಿಗೆ ಹೆಣ್ಣು ಸಿಕ್ಕಿರಲಿಲ್ಲ. ಇದರಿಂದಾಗಿ ಪಾಲಾಕ್ಷಯ್ಯ ಕುಟುಂಬ ಚಿಂತಾಕ್ರಾಂತವಾಗಿತ್ತು.

ಈ ನಡುವೆ ಪಾಲಾಕ್ಷಯ್ಯಗೆ ಕುಷ್ಟಗಿ ಮೂಲದ ಬಸವರಾಜು ಪರಿಚಯವಾಗಿದ್ದು, ಆತನ ಬಳಿ ಅಳಲು ತೋಡಿಕೊಂಡಾಗ ಬಸವರಾಜು ಹುಬ್ಬಳ್ಳಿ ಮೂಲದ ಬ್ರೋಕರ್ ಲಕ್ಷ್ಮೀಯನ್ನ ಪರಿಚಯ ಮಾಡಿಸುತ್ತಾನೆ. ಈ ಕಿಲಾಡಿ ಬ್ರೋಕರ್ ಲಕ್ಷ್ಮೀ ಪಾಲಾಕ್ಷಯ್ಯ ಕುಟುಂಬಕ್ಕೆ ನಯವಾಗಿ ವಂಚಿಸಲು ಪ್ಲಾನ್ ಮಾಡುತ್ತಾಳೆ.

ಕಿಲಾಡಿ ಬ್ರೋಕರ್ ಲಕ್ಷ್ಮೀ ನಮ್ಮ ಬಳಿ ಒಂದು ಹೆಣ್ಣಿದೆ, ಅವಳಿಗೆ ತಂದೆ ತಾಯಿ ಇಲ್ಲ, ನೀವೇ ಮದುವೆ ಮಾಡಿಕೊಳ್ಳಬೇಕು ಎಂದು ಸುಳ್ಳಿನ ಕಥೆ ಹೆಣೆಯುತ್ತಾಳೆ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದ ಲಕ್ಷ್ಮೀ ಬಾಳಾಸಾಬ್ ಎಂಬ ಆಂಟಿಯನ್ನು ಕೋಮಲಾ ಎಂಬ ಹೆಸರಿನಲ್ಲಿ ಪರಿಚಯಿಸಿ, ಕೋಮಲಾಳ ಜೊತೆಗೆ ಐವರು ನಕಲಿ ಸಂಬಂಧಿಕರನ್ನು ಕರೆದುಕೊಂಡು ಪಾಲಾಕ್ಷಯ್ಯರ ಮನೆಗೆ ಬರುತ್ತಾಳೆ.

ಪಾಲಾಕ್ಷಯ್ಯರ ಮನೆಗೆ ಬಂದ ಮೂರನೇ ದಿನಕ್ಕೆ ಅಂದರೆ ಕಳೆದ ನವೆಂಬರ್ 11 ರಂದು ಅತ್ತಿಗಟ್ಟದ ದೇವಸ್ಥಾನ ಒಂದರಲ್ಲಿ ಮದುವೆಯನ್ನೂ ನಿಶ್ಚಯ ಮಾಡಿಬಿಡುತ್ತಾರೆ. ಕೋಮಲಾ ಅಲಿಯಾಸ್ ಲಕ್ಷ್ಮೀ ಆಂಟಿ ಯುವಕ ದಯಾನಂದ ಮೂರ್ತಿ ಜೊತೆ ಹಸೆಮಣೆ ಏರುತ್ತಾಳೆ.

ವಧು-ವರರ ಕಡೆಯವರು ಮದುವೆಯ ಭೂರಿಭೋಜನ ಸವಿದು ಹೋಗುತ್ತಾರೆ. ಮದುವೆಯಾದ ನಾಲ್ಕೇ ದಿನಕ್ಕೆ ಬ್ರೋಕರ್ ಲಕ್ಷ್ಮೀ ಶಾಸ್ತ್ರದ ನೆಪವೊಡ್ಡಿ ಮದುಮಗಳನ್ನು ಒಂಟಿಯಾಗಿ ತವರು ಮನೆಗೆ ಕಳುಹಿಸಬೇಕು ಎಂದು ತಾಕೀತು ಮಾಡುತ್ತಾಳೆ.

ಇದನ್ನು ನಂಬಿದ ಪಾಲಾಕ್ಷಯ್ಯ ಕುಟುಂಬ ಮದುಮಗಳು ಕೋಮಲಾಳನ್ನು ಹುಬ್ಬಳ್ಳಿಗೆ ಕಳುಹಿಸುತ್ತಾರೆ. ಈ ವೇಳೆ ಬ್ರೋಕರ್ ಲಕ್ಷ್ಮೀಗೆ 1.5 ಲಕ್ಷ ರೂ ನಗದು ಕೊಟ್ಟಿರುತ್ತಾರೆ. ಜೊತೆಗೆ ಮಧುಮಗಳಿಗೆ ಮಾಂಗಲ್ಯ ಸರ, ಚೈನ್, ಕಿವಿಯೋಲೆ ಸೇರಿ ಸುಮಾರು 50 ಗ್ರಾಂ ತೂಕದ ಒಡವೆ ಹಾಕಿರುತ್ತಾರೆ. ಈ ನಗದು ಮತ್ತು ಒಡವೆಯೊಂದಿಗೆ ತವರು ಮನೆಗೆ ತೆರಳುತ್ತಾಳೆ ಕೋಮಲ. ಒಂದು ವಾರ ಆದರೂ ವಾಪಸ್ ಬಾರದೇ ಇದ್ದಾಗ ಪಾಲಾಕ್ಷಯ್ಯ ಕುಟುಂಬಕ್ಕೆ ಅನುಮಾನ ಬರುತ್ತದೆ.

ಈ ಕಿಲಾಡಿ ಬ್ರೋಕರ್ ಲಕ್ಷ್ಮೀ ಫೋನ್​ ಸ್ವಿಚ್ ಆಪ್ ಮಾಡಿಕೊಳ್ಳುತ್ತಾಳೆ. ಬಳಿಕ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಇಡೀ ದೋಖಾ ಬಯಲಾಗುತ್ತದೆ. ಈ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಒಂದು ವರ್ಷದ ಬಳಿಕ ವಂಚಕರ ಗ್ಯಾಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮದುಮಗಳು ಕೋಮಲಾ ಅಲಿಯಾಸ್​ ಲಕ್ಷ್ಮೀ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮಮ್ಮ ಬ್ರೋಕರ್ ಲಕ್ಷ್ಮಿಯನ್ನು ಕಂಬಿ ಹಿಂದೆ ಕಳುಹಿಸಲಾಗಿದೆ‌.


Spread the love

LEAVE A REPLY

Please enter your comment!
Please enter your name here