ಜಮ್ಮು-ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ!

0
Spread the love

ನವದೆಹಲಿ: ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆ ಎಲೆಕ್ಷನ್​​ ಹಿನ್ನೆಲೆಯಲ್ಲಿ ಇಂದು ಕೇಂದ್ರ ಚುನಾವಣಾ ಆಯೋಗ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ಮಾಡಲು ಚುನಾವಣೆ ಆಯೋಗ ರೆಡಿ ಆಗಿದ್ದು, ಸೆಪ್ಟಂಬರ್ 18 ರಂದು ಮೊದಲ ಹಂತ, 24 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಹಾಗೆ ಎರಡನೇ ಹಂತದ ಮತದಾ ಸೆ. 25 ರಂದು ನಡೆಯಲಿದ್ದು

Advertisement

26 ಕ್ಷೇತ್ರಗಳ ಮತದಾರರು ಮತ ಹಾಕಲಿದ್ದಾರೆ ಮತ್ತು ಅಕ್ಟೋಬರ್ 1ಕ್ಕೆ 40 ಕ್ಷೇತ್ರಗಳಿಗೆ ಮೂರನೇ ಹಂತದ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 4ಕ್ಕೆ ಅಂದ್ರೆ ಗಾಂಧಿ ಜಯಂತಿಯ ಎರಡು ದಿನದ ಬಳಿಕ ಜಮ್ಮು, ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ಜಮ್ಮು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 87.09 ಲಕ್ಷ ಮತದಾರರಿದ್ದಾರೆ. ಅದರಲ್ಲಿ ಮಹಿಳೆಯರು 42.62 ಲಕ್ಷ ಹಾಗೂ ಪುರುಷರು 44.46 ಲಕ್ಷ ದಷ್ಟಿದ್ದರೆ. ನೂತನ ಮತದಾರರು 3.71 ಲಕ್ಷದಷ್ಟಿದ್ದಾರೆ. ಯುವಕರು 20 ಲಕ್ಷದಷ್ಟು ಮತದಾರರಿದ್ದಾರೆ ಎಂದು ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಒಟ್ಟು 11, 838 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here