HomeGadag Newsವೃದ್ಧಾಶ್ರಮದಲ್ಲಿ ವಿಶಿಷ್ಠವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

ವೃದ್ಧಾಶ್ರಮದಲ್ಲಿ ವಿಶಿಷ್ಠವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಗುರುವಾರ 78ನೇ ಸ್ವತಂತ್ರ ದಿನಾಚರಣೆಯನ್ನು ಎಲ್ಲೆಡೆ ಅದ್ದೂರಿಯಾಗಿ ಆಚರಿಸಿದರೆ, ಆಲ್ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ವತಿಯಿಂದ ಪಟ್ಟಣದ ಯಜಮಾನ್ ಜಿ.ಎಫ್. ಉಪನಾಳ ಪ್ರತಿಷ್ಠಾನದ ಶಾಂತಿಧಾಮ ವೃದ್ಧಾಶ್ರಮದ ಹಿರಿಯರೊಂದಿಗೆ ದ್ವಜಾರೋಹಣ ನೆರವೇರಿಸಿ, ಅವರಿಗೆ ಸಿಹಿಭೋಜನವನ್ನು ಏರ್ಪಡಿಸಿ ಸ್ವಾತಂತ್ರೋತ್ಸವವನ್ನು ವಿಶಿಷ್ಟವಾಗಿ ಆಚರಿಸಿ ಗಮನ ಸೆಳೆದರು.

ಬೆಳಿಗ್ಗೆ ಶಾಸಕ ಡಾ.ಚಂದ್ರು ಲಮಾಣಿ ದ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು ಅನೇಕರು ಮಾತನಾಡಿದರು. ಈ ಸಂದರ್ಭದಲ್ಲಿ ಅಸೋಸಿಯೇಷನ್‌ನ ತಾಲೂಕಾಧ್ಯಕ್ಷೆ ಮಧು ಖಟವಟೆ ಮಾತನಾಡಿ, ನಮಗೆ ಸ್ವಾತಂತ್ರ ದೊರೆಯಲು ಅಂದಿನ ಹಿರಿಯರು ಮಾಡಿದ ತ್ಯಾಗ ಬಲಿದಾನ ಕಾರಣವಾಗಿದೆ. ಹಿರಿಯರ ಮಾರ್ಗದರ್ಶನ, ಅವರ ನಡೆನುಡಿಗಳನ್ನು ಪಾಲಿಸುವದರ ಜೊತೆಗೆ ಅವರನ್ನು ಗೌರವದಿಂದ ನೋಡಿಕೊಳ್ಳುವ ಕಾರ್ಯವಾಗಬೇಕು. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಇಲ್ಲಿನ ಹಿರಿಯರೊಂದಿಗೆ ಆಚರಿಸಿದ್ದು ನೆಮ್ಮದಿ ತಂದಿದೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಉಪನಾಳ, ಶಂಕ್ರಣ್ಣ ಗೊರವರ, ಸಾಲಿಮಠ, ನೀಲಪ್ಪ ಹತ್ತಿ, ವಾರ್ಡನ್ ಸುನೀತಾ ಡಿ., ಅಸೋಸಿಯೇಷನ್ ಕಾರ್ಯದರ್ಶಿ ನೀಲಮ್ಮ ಅಡವಿ, ಲಕ್ಷ್ಮಿ ಕಲ್ಮಠ್, ವಿದ್ಯಾ ಮಾಂಡ್ರೆ, ನಿರ್ಮಲಾ ಕದಡಿ, ಪ್ರಿಯಾ ಗೋಂಧಕರ, ಕವಿತಾ ಗೊಜಗೊಜಿ, ಸೀತಾ, ದೀಪಾ ಬದಿ, ಸಂಧ್ಯಾ, ವೃದ್ಧಾಶ್ರಮದ ಸಿಬ್ಬಂದಿಗಳು, ಹಿರಿಯರು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img