ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪುರಾತನ ಇತಿಹಾಸವನ್ನು ಹೊಂದಿರುವ ಜಾಗೃತ ಸ್ಥಳವಾಗಿದ್ದು, ಕಲಿಯುಗದ ಕಲ್ಪವೃಕ್ಷವಾಗಿರುವ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಪ್ರತಿವರ್ಷ ಆಚರಿಸುತ್ತಿದ್ದು, ಈ ವರ್ಷ ಆ.20, 21 ಮತ್ತು 22ರಂದು 304ನೇ ವರ್ಷದ ಆರಾಧನಾ ಮಹೋತ್ಸವವನ್ನು ಶ್ರೀಮಠದಲ್ಲಿ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ಹೇಳಿದರು.
ಅವರು ಗುರುವಾರ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆಯ ಕುರಿತು ವಿಪ್ರಬಾಂಧವರ ಮತ್ತು ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನೂರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಎಲ್ಲರ ಸಹಾಯ ಸಹಕಾರದಿಂದ ಆರಾಧನೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಇದೇ ಆಗಸ್ಟ್ 20,21 ಮತ್ತು 22ರಂದು ಆರಾಧನೆ ಕಾರ್ಯಕ್ರವು ಸಂಪ್ರದಾಯದಂತೆ ನಡೆಯಲಿದೆ ಎಂದರು.
ಪ್ರತಿದಿನ ಬೆಳಿಗ್ಗೆ 10ರಿಂದ 11.30ರವರೆಗೆ ವಿದ್ವಜ್ಜನರಿಂದ ಪುರಾಣ ಪ್ರವಚನ ಮತ್ತು ಉಪನ್ಯಾಸ ನಡೆಯಲಿದೆ. ಆ.22ರಂದು ಬೆಳಿಗ್ಗೆ 10 ಗಂಟೆಗೆ ರಥೋತ್ಸವ ನೆರವೇರಲಿದೆ ಎಂದರು.
ಸಮಾಜದ ಹಿರಿಯ ಮುಖಂಡ ವಿ.ಎಲ್. ಪ್ರಜಾರ, ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ತಾಲೂಕ ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿದರು. ಸಭೆಯಲ್ಲಿ ವೆಂಕಟೇಶ ಗುಡಿ, ಡಿ.ಪಿ. ಹೇಮಾದ್ರಿ, ಆರ್.ಎಚ್. ಕುಲಕರ್ಣಿ, ಹರೀಶ ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ಎಸ್.ಜಿ. ಹೊಂಬಳ, ಅರವಿಂದ ದೇಶಪಾಂಡೆ, ಶಂಕರ ಬೆಟಗೇರಿ, ಎ.ಪಿ. ಕುಲಕರ್ಣಿ, ಪಾಪು ಪುರೋಹಿತ್, ಕೆ.ಎಸ್. ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಅನಿಲ ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ, ದಿಗಂಬರ ಪೂಜಾರ, ಗುರಣ್ಣ ಪಾಟೀಲಕುಲಕರ್ಣಿ, ರಾಘವೇಂದ್ರ ಪೂಜಾರ, ಶ್ರೀಕಾಂತ ಪೂಜಾರ, ಆರ್.ಎನ್. ಪಂಚಬಾವಿ, ರಮೇಶ ತೊರಗಲ್, ಬಾಬು ಅಳವಂಡಿ, ಮಂಜುನಾಥ ವಂಟಿ ಮುಂತಾದವರು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು.