HomeGadag Newsಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆ ಇಂದಿನಿಂದ

ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆ ಇಂದಿನಿಂದ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಶ್ರೀ ರಾಘವೇಂದ್ರ ಉತ್ಸವ ಮಂಡಳಿ ವತಿಯಿಂದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಆಗಸ್ಟ್ 20ರಿಂದ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳವರ 353ನೇ ಆರಾಧನಾ ಕಾರ್ಯಕ್ರಮಗಳು ಜರುಗಲಿವೆ.

ಆ. 20ರಂದು ಪ್ರಥಮಾರಾಧನೆ ನಿಮಿತ್ತ ಬೆಳಿಗ್ಗೆ 5 ಗಂಟೆಗೆ ಶ್ರೀ ಗುರುಪದಹಾರ ಪಾರಾಯಣ, 7ಕ್ಕೆ ಅಷ್ಟೋತ್ತರ, ಪಂಚಾಮೃತ, ಅಲಂಕಾರ, ಮಂಗಳಾರತಿ, 10ಕ್ಕೆ ಶ್ರೀ ರಾಘವೇಂದ್ರಾಯ ನಮಃ ಅಷ್ಟಾಕ್ಷರ ಜಪಹೋಮ, ಸಂಜೆ 5ಕ್ಕೆ ಶ್ರೀ ಲಕ್ಷ್ಮಿನಾರಾಯಣ ಭಜನಾ ಮಂಡಳ ಇವರಿಂದ ಭಜನಾಮೃತ, 6ಕ್ಕೆ ಪಂ. ಶ್ರೀ ವರದಾಚಾರ್ಯ ಜಾಲಿಹಾಳ ಇವರಿಂದ ಉಪನ್ಯಾಸ, 7.30ಕ್ಕೆ ಲಘು ರಥೋತ್ಸವ ಜರುಗುವವು.

ಆ.21ರಂದು ಮಧ್ಯಾರಾಧನೆ ನಿಮಿತ್ತ ಬೆಳಿಗ್ಗೆ 5 ಗಂಟೆಗೆ ಶ್ರೀ ಗುರುಪದಹಾರ ಪಾರಾಯಣ, 7ಕ್ಕೆ ಅಷ್ಟೋತ್ತರ, ಪಂಚಾಮೃತ, ಅಲಂಕಾರ, ಮಂಗಳಾರತಿ, 10.30ಕ್ಕೆ ಮನ್ಯುಸೂಕ್ತ ಹೋಮ, ಸಂಜೆ 5ಕ್ಕೆ ಚೈತನ್ಯ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ, 6.30ಕ್ಕೆ ಪಂ. ಪಾಂಡುರಂಗಾಚಾರ್ಯ ಜಾಲಿಹಾಳ ಇವರಿಂದ ಉಪನ್ಯಾಸ, ರಾತ್ರಿ 8.30ಕ್ಕೆ ಲಘು ರಥೋತ್ಸವ ಜರುಗುವುದು.

ಆ. 22ರಂದು ಉತ್ತರಾರಾಧನೆ ನಿಮಿತ್ತ ಬೆಳಿಗ್ಗೆ 7ಕ್ಕೆ ಅಷ್ಟೋತ್ತರ, ಪಂಚಾಮೃತ, ಅಲಂಕಾರ, ನಂತರ 10ಕ್ಕೆ ಮಹಾರಥೋತ್ಸವ, ರಾತ್ರಿ 8.30ಕ್ಕೆ ಮಂಗಳಾರತಿ, ತೊಟ್ಟಿಲು ಸೇವೆ ಮುಂತಾದ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ರಾಘವೇಂದ್ರಸ್ವಾಮಿ ಉತ್ಸವ ಮಂಡಳಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img