ಫೀಲ್ಡ್ʼಗಿಳಿದ ಪೊಲೀಸರ ಕೈಯಲ್ಲಿ ತಗ್ಲಾಕಿಕೊಂಡ ಎಣ್ಣಿ ಗಿರಾಕಿ..! ಕಾಲಿಗೆ ಬಿದ್ದು ಬಿಟ್ಟು ಬಿಡಿ ಅಂತ ಗೋಳಾಟ

0
Spread the love

ಗದಗ: ಕಾನೂನು ಉಲ್ಲಂಘಿಸಿ ಬೈಕ್ ರೈಡಿಂಗ್ ಮಾಡ್ತಿದ್ದವರಿಗೆ ಗದಗ ಸಂಚಾರಿ ಪೊಲೀಸರ ಶಾಕ್ ಕೊಟ್ಟಿದ್ದಾರೆ. ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ನಂಬರ್ ಪ್ಲೇಟ್, ಹೆಲ್ಮೆಟ್ ಇಲ್ಲದ ಬೈಕ್ ಗಳನ್ನು ಸೀಜ್‌ ಮಾಡಿದ್ದಾರೆ. ಅದರ ಜೊತೆಗೆ ಫೀಲ್ಡ್ ಗಿಳಿದ ಪೊಲೀಸರ ಕೈಯಲ್ಲಿ ತಗ್ಲಾಕಿಕೊಂಡ ಎಣ್ಣಿ ಗಿರಾಕಿ ಪೊಲೀಸರ ಕಾಲಿಗೆ ಬಿದ್ದು ಬಿಟ್ಟು ಬಿಡಿ ಅಂತ ಗೋಳಾಡಿದ್ದಾನೆ.

Advertisement

ಅದಲ್ಲದೆ ಹಣ ಪಡೆದು ನನ್ನ ಬಿಟ್ಟು ಬಿಡಿ ಅಂತ ಪೊಲೀಸರಿಗೆ ಹಣ ನೀಡಲು ಮುಂದಾದ ವ್ಯಕ್ತಿಯ ಮೇಲೆ ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ಹಾಕಿ ಕಳಿಸಿದ್ದಾರೆ.

ಇನ್ನೂ ರಾಯಲ್ ಎನ್ ಫೀಲ್ಡ್ ನಲ್ಲಿ ರಾಯಲ್ ಆಗಿ ಬಂದವನಿಗೆ ಪೊಲೀಸರು ಬೆವರಿಳಿಸಿದ್ದಾರೆ. ಮಾಡಿಫೈಡ್ ಸೈಲೆನ್ಸರ್ ಹಾಕಿ ನಿಯಮ ಉಲ್ಲಂಘನೆ ಮಾಡಿದ್ದು, ಬೈಕ್ ಹಿಡಿದಿದ್ದಕ್ಕೆ ಟೈಮ್ ವೇಸ್ಟ್‌ ಮಾಡಬೇಡಿ, ಎಷ್ಟು ದಂಡ ಹಾಕ್ತೀರಿ ಹಾಕಿ ಮೊದ್ಲು ಬೈಕ್ ಬಿಡಿ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ಅವಾಜ್ ಹಾಕಿದ್ದಲ್ಲದೆ ಟ್ರಾಫಿಕ್ ಪಿಎಸ್ಐ ಶಕುಂತಲಾ ಜೊತೆ ವಾಗ್ವಾದಕ್ಕಿಳಿದ್ದಾನೆ.


Spread the love

LEAVE A REPLY

Please enter your comment!
Please enter your name here