HomeGadag Newsವಿಶೇಷ ಮಕ್ಕಳ ಸೇವೆ ಮಾಡಿ : ಡಾ.ಪರಶುರಾಮ ಬಾರಕಿ

ವಿಶೇಷ ಮಕ್ಕಳ ಸೇವೆ ಮಾಡಿ : ಡಾ.ಪರಶುರಾಮ ಬಾರಕಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿಶೇಷ ಚೇತನ ಮಕ್ಕಳು ದೈವಸ್ವರೂಪಿಗಳಾಗಿದ್ದು, ಅವರಿಗೆ ಸಮಾಜದ ಪ್ರತಿಯೊಬ್ಬರ ಪ್ರೀತಿ, ಕಾಳಜಿ ಅವಶ್ಯವಾಗಿದೆ. ಸೇವಾ ಮನೋಭಾವದಿಂದ ಇಂತಹ ಮಕ್ಕಳ ಸೇವೆ ಮಾಡಿದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ದಿಮಾಂಧ್ಯ ಮಕ್ಕಳ ವಸತಿ ರಹಿತ ಶಾಲೆಯ ಸಿಬ್ಬಂದಿಗಳ ಪ್ರಾಮಾಣಿಕ ಸೇವಾಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪರಶುರಾಮ ಬಾರಕಿ ಹೇಳಿದರು.

ಅವರು ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ದಿಮಾಂಧ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ಅಗಡಿ ಸಂಸ್ಥೆಯ ಚೇರಮನ್ ಹರ್ಷವರ್ಧನ ಅಗಡಿ ಅವರ ಜನ್ಮದಿನವನ್ನು ಬುದ್ದಿಮಾಂಧ್ಯಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು.

ಪಿಯು ಕಾಲೇಜು ಪ್ರಾಚಾರ್ಯ ಡಾ. ಎನ್. ಹಯವದನ ಮಾತನಾಡಿದರು. ಸಂಸ್ಥೆಯ ಮುಖ್ಯೋಪಾಧ್ಯಾಯೆ ನೀಲಮ್ಮ ದಾಸಪ್ಪನವರ ಸಂಸ್ಥೆಯ ಪರಿಚಯವನ್ನು ಮಾಡಿಕೊಟ್ಟರು. ಜನ್ಮದಿನದ ಪ್ರಯುಕ್ತ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ವಿಶೇಷ ಮಕ್ಕಳಿಗೆ ವಾಲಿಬಾಲ್, ಕೇರಂ, ಬ್ಯಾಟ್, ಬಾಲ್, ಬ್ಯಾಡ್ಮಿಂಟನ್ ಹಾಗೂ ಥೆರಪಿ ಸಾಮಗ್ರಿಗಳನ್ನು ಅಗಡಿ ಸಂಸ್ಥೆಯ ವತಿಯಿಂದ ನೀಡಲಾಯಿತು.

ಅಗಡಿ ಸಂಸ್ಥೆಯ ಆಡಳಿತಾಧಿಕಾರಿ ವಿಕ್ರಮ ಶಿರೋಳ, ಲೆಕ್ಕಪರಿಶೋಧಕ ರವಿಪ್ರಕಾಶ, ಡಾ. ಆರ್.ಎಮ್. ಪಾಟೀಲ ಡಾ. ರಾಜಶೇಖರ ಕೂನಬೇವು, ಡಾ. ದೇವೇಂದ್ರ ಕೆ, ಡಾ. ಸಂತೋಷ ಬುಜರಿ, ಪ್ರೊ. ಪ್ರಕಾಶ ಹೊಂಗಲ್, ಪ್ರೊ. ದಯಾನಂದ ಬಡಗನ್ನವರ, ಪ್ರೊ. ಪ್ರತೀಮಾ ಮಾಪುರುಷ, ಪ್ರೊ. ರಾಜೇಶ್ವರಿ ಗಾಮನಗಟ್ಟಿ, ಪ್ರೊ. ಸಿ.ಎಂ. ಕಗ್ಗಲಗೌಡ್ರ, ಶಿಕ್ಷಕರಾದ ಲಲಿತಾ ದಾಸಪ್ಪನವರ, ಮಹಾಂತೇಶ, ಪ್ರಶಾಂತ ಎಸ್, ನೇತ್ರಾ ತಳಗೇರಿ, ಅಕ್ಕಮ್ಮ ಕೊರದಾಳ, ಗೌರಮ್ಮ, ಹೇಮಾವತಿ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img