HomeGadag Newsಕ್ರೀಡಾ ಮನೋಭಾವನೆ ಬೆಳೆಯಲಿ : ಎಂ.ಎಂ. ಹವಳದ

ಕ್ರೀಡಾ ಮನೋಭಾವನೆ ಬೆಳೆಯಲಿ : ಎಂ.ಎಂ. ಹವಳದ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕ್ರೀಡೆ ಪರಸ್ಪರ, ಸ್ನೇಹ, ಬಾಂಧವ್ಯ ವೃದ್ಧಿಸುವ, ಹೊಂದಾಣಿಕೆ ಮತ್ತು ನಾಯಕತ್ವದ ಗುಣ ಬೆಳೆಸುವಲ್ಲಿ ನೆರವಾಗುತ್ತದೆ ಎಂದು ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಂ. ಹವಳದ ಹೇಳಿದರು.

ಅವರು ಪಟ್ಟಣದ ಎಚಿಜಿಎಂ ಯುನಿವರ್ಸಲ್ ಶಾಲೆಯಲ್ಲಿ ಗ್ರೂಪ್ ನಂ.2ರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಪೂರಕ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಕ್ರೀಡಾ ಮನೋಭಾವ ಹೊಂದಿ ಆಸಕ್ತಿಯಿಂದ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕ್ರೀಡಾ ದ್ವಜಾರೋಹಣ ನೆರವೇರಿಸಿದ ಸಂಸ್ಥೆಯ ಕಾರ್ಯದರ್ಶಿ ಬಸವೇಶ ಮಹಾಂತಶೆಟ್ಟರ ಮಾತನಾಡಿ, ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಗೆಲ್ಲಲು ಉತ್ತಮ ತರಬೇತಿ ಅಗತ್ಯ.

ಪರಿಣತಿಯನ್ನು ಗಳಿಸಲು ಸತತ ಸಾಧನೆ ಮಾಡಬೇಕು. ಎಲ್ಲಾ ವಿದ್ಯಾರ್ಥಿಗಳೂ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಕ್ರಿಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಕರೆನೀಡಿದರು.

ಬಿಆರ್‌ಪಿ ಈಶ್ವರ ಮೆಡ್ಲೇರಿ ಮಾತನಾಡಿದರು. ಶಿವಾನಂದ ಅಸುಂಡಿ ದೊಡ್ಡೂರ ಸಿಆರ್‌ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ರಮೇಶ ನವಲೆ, ಎಸ್.ಎಫ್. ಕೊಡ್ಲಿ, ಸ.ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಹರ್ಲಾಪುರ, ಕಾರ್ಯದರ್ಶಿ ಚಂದ್ರು ನೇಕಾರ, ಉಪಾಧ್ಯಕ್ಷ ಡಿ.ಡಿ .ಲಮಾಣಿ, ಸಿಆರ್‌ಪಿಗಳಾದ ಉಮೇಶ್ ನೇಕಾರ, ಎನ್.ಎ. ಮುಲ್ಲಾ, ಸತೀಶ ಬೋಮಲೆ, ಎಮ್.ಎಸ್. ಕಾಳೆ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಕೆ. ದ್ಯಾವನಗೌಡ್ರ, ಎಮ್.ಐ. ಕಣಕೆ, ಗುತ್ತಲ, ಮುಖ್ಯ ಶಿಕ್ಷಕಿ ಕವಿತಾ ಮೆಣಸಗಿ, ವಿವಿಧ ಶಾಲೆಗಳ ಕ್ರೀಡಾಪಟುಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img