HomeGadag Newsಪವಿತ್ರ ಉಮ್ರಾ ಯಾತ್ರೆಗೆ ವ್ಯವಸ್ಥೆ : ಸೈಯದ್ ಖಾಲಿದ್ ಕೊಪ್ಪಳ

ಪವಿತ್ರ ಉಮ್ರಾ ಯಾತ್ರೆಗೆ ವ್ಯವಸ್ಥೆ : ಸೈಯದ್ ಖಾಲಿದ್ ಕೊಪ್ಪಳ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಉಚಿತವಾಗಿ ಪವಿತ್ರವಾದ ಉಮ್ರಾ ಯಾತ್ರೆಗೆ ಒಬ್ಬರು ಹಫೀಜ್ ಹಾಗೂ ಒಬ್ಬ ಮೌಝಾನ್‌ರವರನ್ನು ಪ್ರತಿ ವರ್ಷಕ್ಕೊಮ್ಮೆ ಕಳಿಸಲಾಗುವುದು. ಅದರ ಜೊತೆಗೆ ಇಬ್ಬರು ಬಡ ವಿದ್ಯಾರ್ಥಿಗಳ 1ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸದ ಖರ್ಚನ್ನು ಭರಿಸಲಾಗುವುದೆಂದು ಯುವ ಮುಖಂಡ, ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾಧ್ಯಕ್ಷರಾದ ಸೈಯದ್ ಖಾಲಿದ್ ಕೊಪ್ಪಳ ಹೇಳಿದರು.

ಇತ್ತೀಚಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಇಬ್ರಾಹಿಂ ಹಳ್ಳಿಕೆರೆ, ಹಲವಾರು ವರ್ಷಗಳಿಂದ ಪ್ರಾಮಾಣಿಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದ ಸೈಯದ್ ಖಾಲಿದ್ ಕೊಪ್ಪಳರು ಇದೊಂದು ಐತಿಹಾಸಿಕ ನಡೆಯನ್ನು ಸಭೆಯಲ್ಲಿ ತೆಗೆದುಕೊಂಡಿದ್ದಾರೆ. ಸಂಘಟನೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಸಂಘಟಿಸಿ ಅಲ್ಪಸಂಖ್ಯಾತ ರಕ್ಷಣೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಗಳಿಗಾಗಿ ಶ್ರಮಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಕ್ಬರ್ ಬೇಗ, ಉಸ್ಮಾನ್ ಮಾಳೆಕೊಪ್ಪ, ಶೌಕತ್ ಕಾತರಕಿ, ಅಲ್ತಾಫ್ ಕಾಗದಗಾರ್, ಅನ್ವರ್ ಬುವಾಜಿ, ಅಶ್ರಫ್ ಸೈಯದ್, ಅಕ್ಬರ್ ಅತ್ತಾರ್, ಮತಿನ್ ಲಾಡ್‌ಸಾಬ್‌ನವರ್, ದಾದು ಮುಂಡರಗಿ, ಅಲ್ತಾಫ್ ಕಟ್ಟಿಮನಿ, ಇಮಾಮ್ ನಮಾಜಿ, ದಾವೂದ್ ಕಿಲೆದಾರ್, ಫಾರುಕ್ ಸಿಂದಗಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!