Homecultureಭಜನಾ ಕಾರ್ಯಕ್ರಮ ಮುಕ್ತಾಯ ಸಮಾರಂಭ

ಭಜನಾ ಕಾರ್ಯಕ್ರಮ ಮುಕ್ತಾಯ ಸಮಾರಂಭ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ತಾಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಮೋಚಿಗಾರ ಸಮಾಜದ ಶ್ರೀ ಮಂಜುನಾಥ ಭಜನಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮದ ಮುಕ್ತಾಯ ಸಮಾರಂಭ ನಡೆಯಿತು.

ಶಿರೂರು ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಪರ್ಯಂತ ಬೆಳಗಿನ ಜಾವ ಭಜನೆ ಮಾಡುವ ಮೂಲಕ ಅಮಾವಾಸ್ಯೆ ರಾತ್ರಿ ಶ್ರೀ ಕನಕಮ್ಮ ದೇವಿ ಪಲ್ಲಕ್ಕಿ ಉತ್ಸವ ಆಚರಿಸಿದರು. ಅಮಾವಾಸ್ಯೆ ಪಾಡ್ಯದಂದು ಬೆಳಿಗ್ಗೆ 11ಕ್ಕೆ ಪ್ರಾರಂಭಗೊಂಡ ಭಜನಾ ಮುಕ್ತಾಯ ಸಮಾರಂಭ ಶಿರೂರು ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ ಶ್ರೀ ಕನಕಮ್ಮ ದೇವಿ ದೇವಸ್ಥಾನ ತಲುಪಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮೋಚಿಗಾರ ಸಮಾಜದ ಗುರು-ಹಿರಿಯರು ಮತ್ತು ಮಹಿಳೆಯರು, ಶ್ರೀ ಮಂಜುನಾಥ ಭಜನಾ ಸಂಘದ ಯುವಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img