HomeGadag Newsಶಿಕ್ಷಕರು ದೇವರು ಕೊಟ್ಟ ವರ : ಅಮರಯ್ಯ ಚಿನ್ನಯ್ಯನಮಠ

ಶಿಕ್ಷಕರು ದೇವರು ಕೊಟ್ಟ ವರ : ಅಮರಯ್ಯ ಚಿನ್ನಯ್ಯನಮಠ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಒಂದು ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು. ತಮ್ಮ ಜೀವನಪರ್ಯಂತ ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವನ್ನು ಮೂಡಿಸಿ ಜ್ಞಾನವನ್ನು ನೀಡುವ ಶಿಕ್ಷಕ ನಮ್ಮ ಪಾಲಿಗೆ ಆ ದೇವರು ಕೊಟ್ಟ ವರ. ಇಂತಹ ಶಿಕ್ಷಕರಿಗೆ ಗೌರವ ಸೂಚಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ ಎಂದು ಪ್ರಾಂಶುಪಾಲ ಅಮರಯ್ಯ ಚಿನ್ನಯ್ಯನಮಠ ಹೇಳಿದರು.

ಇಲ್ಲಿನ ವಿ.ಪಿ. ಗಾಲಾ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1962ರಲ್ಲಿ ಭಾರತದ ಎರಡನೇ ರಾಷ್ಟçಪತಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರ ವಿದ್ಯಾರ್ಥಿಗಳು ಸೆಪ್ಟೆಂಬರ್ 5ನ್ನು ವಿಶೇಷ ದಿನವಾಗಿ ಆಚರಿಸಲು ಅನುಮತಿ ಕೇಳಲು ಅವರನ್ನು ಸಂಪರ್ಕಿಸಿದರು. ಈ ವೇಳೆ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಮಾಜಕ್ಕೆ ಶಿಕ್ಷಕರ ಅಮೂಲ್ಯ ಕೊಡುಗೆಯನ್ನು ಗುರುತಿಸಲು ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಸೂಚಿಸಿದರು. ಅಂದಿನಿಂದ ವಿಶ್ವ ಶಿಕ್ಷಕರ ದಿನವನ್ನು ಅಕ್ಟೋಬರ್ 5ರಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷರಾದ ರಚನಾ ಗಾಲಾ, ಸೆಕ್ರೆಟರಿ ಪಂಕಜ್ ಗಾಲಾ, ನಿರ್ದೇಶಕರಾದ ಗುಂಜನ ಗಾಲಾ, ಕಾಲೇಜಿನ ಪ್ರಿನ್ಸಿಪಾಲರಾದ ಅಮರಯ್ಯ ಚಿನ್ನಯ್ಯನಮಠ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img