HomeEntertainmentತಮಿಳು ನಿರ್ಮಾಪಕ ದಿಲ್ಲಿ ಬಾಬು ವಿಧಿವಶ!

ತಮಿಳು ನಿರ್ಮಾಪಕ ದಿಲ್ಲಿ ಬಾಬು ವಿಧಿವಶ!

For Dai;y Updates Join Our whatsapp Group

Spread the love

ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ತಮಿಳಿನ ಖ್ಯಾತ ನಿರ್ಮಾಪಕ ದಿಲ್ಲಿ ಬಾಬು ಹಠಾತ್ ವಿಧಿವಶರಾಗಿದ್ದಾರೆ. ಸಿನಿಮಾ ನಿರ್ಮಾಣ ಮಾಡಿ ಚಿತ್ರರಂಗದಲ್ಲಿ ಇನ್ನಷ್ಟು ವರ್ಷ ಇರಬೇಕಿದ್ದ ಅವರು ಈಗ ಇಲ್ಲವಾಗಿದ್ದಾರೆ. ಮಧ್ಯರಾತ್ರಿ 12:30ರ ಸಮಯಕ್ಕೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇಂದೇ ಅವರ ಅಂತ್ಯಕ್ರಿಯೆ ನೆರವೇರಲಿದೆ.

ದಿಲ್ಲಿ ಬಾಬು ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಮಟ್ಟದ ಶಾಕ್ ತಂದಿದೆ. ತಮಿಳು ಫಿಲ್ಮ್​ ಇಂಡಸ್ಟ್ರಿಯ ಅನೇಕರು ದಿಲ್ಲಿ ಬಾಬು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರನ್ನು ಉಳಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ.

ಚೆನ್ನೈನ ಪೆರಂಗಳದೂರ್​ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10.30ರ ವೇಳೆಗೆ ಅವರ ಶವವನ್ನು ಮನೆಗೆ ತರಲಾಗಿದೆ. ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!