ಫ್ಲೈಓವರ್ ಕಾಮಗಾರಿ ರಾಡ್ ಬಿದ್ದು ಗಾಯಗೊಂಡಿದ್ದ ಎಎಸ್ಐ ಸಾವು

0
Spread the love

ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್​ಐ ನಾಭಿರಾಜ್ ದಯಣ್ಣವರು ಫ್ಲೈಓವರ್ ಕಾಮಗಾರಿಯ ರಾಡ್​ ಬಿದ್ದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಎಎಸ್​ಐ ನಾಭಿರಾಜ್ ದಯಣ್ಣವರ ಕೋರ್ಟ್ ವೃತ್ತದ ಬಳಿ ಫ್ಲೈ ಓವರ್ ಕಾಮಗಾರಿಯ ರಾಡ್ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಚಿಕಿತ್ಸೆ ಫಲಿಸದೆ ಎಎಸ್​ಐ ನಾಭಿರಾಜ್ ದಯಣ್ಣವರ ಕೊನೆಯುಸಿರೆಳೆದಿದ್ದಾರೆ.

Advertisement

ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ಝಂಡು ಕನ್​ಸ್ಟ್ರಕ್ಷನ್ ನಿರ್ದೇಶಕರಾದ ರಾಮ್‌ಕುಮಾರ್, ಮೋಹಿತ್ ಮತ್ತು ಮನುದೀಪ್, ಯೋಜನಾ ನಿರ್ದೇಶಕ, ಎಂಜಿನಿಯರ್, ಸುರಕ್ಷತಾ ಅಧಿಕಾರಿ, ಕ್ರೇನ್ ಆಪರೇಟರ್ ಮತ್ತು ಕಾರ್ಮಿಕರ ವಿರುದ್ಧ ಎಎಸ್‌ಐ ಪುತ್ರ ರುಷಭ್ ದೂರು ದಾಖಲಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here