Home Crime News ಎರಡು ಕುಟುಂಬಗಳ ನಡುವೆ ಮಾರಾಮಾರಿ: ಓರ್ವನ ಕೊಲೆ, ಆರು ಜನರಿಗೆ ಗಾಯ

ಎರಡು ಕುಟುಂಬಗಳ ನಡುವೆ ಮಾರಾಮಾರಿ: ಓರ್ವನ ಕೊಲೆ, ಆರು ಜನರಿಗೆ ಗಾಯ

0
ಎರಡು ಕುಟುಂಬಗಳ ನಡುವೆ ಮಾರಾಮಾರಿ: ಓರ್ವನ ಕೊಲೆ, ಆರು ಜನರಿಗೆ ಗಾಯ
Spread the love

ರಾಯಚೂರು: ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಕರೆಯದೇ ಹೋಗಿದ್ದಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿ ಓರ್ವನ ಕೊಲೆ ಹಾಗೂ ಆರು ಜನರಿಗೆ ಗಾಯಗಳಾಗಿರುವ ಘಟನೆ ರಾಯಚೂರು ತಾಲ್ಲೂಕಿನ ಮಿರ್ಜಾಪುರ ಗ್ರಾಮದಲ್ಲಿ ನಡೆದಿದೆ.

ಗಲಾಟೆಯಲ್ಲಿ ಭೀಮೇಶ್(40)ಮೃತ ವ್ಯಕ್ತಿಯಾಗಿದ್ದು, ಮೃತನ ತಾಯಿ ರಾಮಲಮ್ಮ, ಸಹೋದರ ಅಲಾದಿ ನಾಯಕ್ ಹಾಗೂ ಇವರ ಸಂಬಂಧಿಕರಾದ ಧೂಳಯ್ಯ, ರಂಗಪ್ಪ, ತಳಾರಿ ಭೀಮಣ್ಣ ಹಾಗೂ ಅಮರೇಶ್ ಎಂಬುವವರಿಗೆ ಗಾಯಗಳಾಗಿವೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಕರೆಯದೆ ಹೋಗಿದ್ದಕ್ಕೆ ಗಲಾಟೆ ನಡೆದಿದೆ.

ನಿನ್ನೆ ತಾಯಮ್ಮ ಎಂಬುವರ ಅಂತ್ಯಕ್ರಿಯೆಯಲ್ಲಿ ಕೊಲೆಯಾದ ಭೀಮೇಶ್ ಕುಟುಂಬದವರು ಭಾಗಿಯಾಗಿದ್ದರು. ಅಂತ್ಯಕ್ರಿಯೆ ನಂತರ ವಿರೋಧಿ ಬಣದವರು ಕಿರಿಕ್ ಮಾಡಿದ್ದಾರೆ. ನಮಗೆ ಹೇಳದೆ ಅಂತ್ಯಕ್ರಿಯೆಗೆ ಬಂದಿದ್ದೀರಿ ಎಂದು ಮನೆಗಳಿಗೆ ನುಗ್ಗಿ ಕೊಡಲಿ, ಚಾಕು, ಮಚ್ಚು, ಕಲ್ಲು, ಕಟ್ಟಿಗೆಯಿಂದ ಹಲ್ಲೆ ಮಾಡಲಾಗಿದ್ದು, ಭೀಮೇಶ್ ಮೃತಪಟ್ಟಿದ್ದಾರೆ.

ಹಲ್ಲೆಗೊಳಗಾದವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ರಾಯಚೂರು ಎಸ್.ಪಿ. ಪುಟ್ಟಮಾದಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here