Homecultureಪೈಗಂಬರರು ಸಮಾಜಕ್ಕೆ ದಾರಿದೀಪ : ಎಂ.ಎಂ. ಗದಗ

ಪೈಗಂಬರರು ಸಮಾಜಕ್ಕೆ ದಾರಿದೀಪ : ಎಂ.ಎಂ. ಗದಗ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಹಾ ಮಾನವತಾವಾದಿ, ಶಾಂತಿದೂತ, ಪ್ರವಾದಿ ಮುಹಮ್ಮದ ಪೈಗಂಬರರ ಜನ್ಮದಿನದ ಅಂಗವಾಗಿ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮಾಜ ಬಾಂಧವರು ಸೋಮವಾರ ಶೃದ್ಧಾ-ಭಕ್ತಿ ಮತ್ತು ವಿಜೃಂಭಣೆಯಿಂದ ಆಚರಿಸಿದರು.

ಹೊಸ ಉಡುಗೆ ಧರಿಸಿದ ಮುಸ್ಲಿಂ ಸಮಾಜ ಬಾಂಧವರು ಬೆಳಿಗ್ಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಬಳಿಕ ಪಟ್ಟಣದ ದೂದಪೀರಾಂ ದರ್ಗಾದಿಂದ ಮುಹಮ್ಮದ ಪೈಗಂಬರ ಭಾವಚಿತ್ರ ಮತ್ತು ಮುಸ್ಲಿಂ ಧರ್ಮದ ಪವಿತ್ರ ಕ್ಷೇತ್ರಗಳ ಚಿತ್ರಗಳನ್ನೊಳಗೊಂಡ ಮೆರವಣಿಗೆ ಮುಖ್ಯ ಬಜಾರ್ ರಸ್ತೆ, ಶಿಗ್ಲಿ ನಾಕಾ, ಗದಗ ನಾಕಾ, ಮೋಮಿನಗಲ್ಲಿ, ಬಳಿಗಾರ ಓಣಿಯ ಮೂಲಕ ಸಾಗಿ ದರ್ಗಾದಲ್ಲಿ ಸಂಪನ್ನಗೊಂಡಿತು. ಅಂಜುಮನ್ ಏ-ಇಸ್ಲಾಂ ಕಮಿಟಿ, ದರ್ಗಾ ಕಮಿಟಿ ಹಾಗೂ ಹಿರಿಯರು, ಯುವಕರು, ಮಕ್ಕಳು ಸೇರಿ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಹೊಸ ಉಡುಗೆ ತೊಟ್ಟು ಪೈಗಂಬರರ ಗೀತೆಗಳೊಂದಿಗೆ ಘೋಷಣೆ ಕೂಗುತ್ತಾ ಹರ್ಷದಿಂದ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ ಮಾತನಾಡಿ, ಮುಹಮ್ಮದ ಪೈಗಂಬರ್ ಅವರು ಇಡೀ ಮಾನವ ಕುಲದ ಒಳಿತಿಗಾಗಿ ಶಾಂತಿ, ಸಮಾನತೆಯ ಸಂದೇಶ ಸಾರಿದ್ದಾರೆ. ಸರಳ, ಸಚ್ಚಾರಿತ್ರ್ಯ ಮತ್ತು ತ್ಯಾಗಭರಿತ ಬದುಕನ್ನು ಸವೆಸಿದ ಅವರು ಮನುಕುಲದಲ್ಲಿ ಚಿರಸ್ಥಾಯಿಯಾಗಿದ್ದಾರೆ. ದೇವನ ಸಂದೇಶವಾಹಕರಾಗಿ ಮಾನವ ಸಮೂಹಕ್ಕೆ ಜ್ಞಾನದ ಬೆಳಕು ಮತ್ತು ಸನ್ಮಾರ್ಗದ ಹಾದಿಯನ್ನು ತೋರಿಸಿದ ಪೈಗಂಬರರ ಅಪ್ರತಿಮ ಪ್ರೀತಿ, ತಾಳ್ಮೆ, ಕ್ಷಮೆ, ವಿನಯ, ಕರುಣೆ ಮತ್ತು ಮಾನವೀಯ ಮೌಲ್ಯಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ದೂದನಾನಾದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ ಕಣಕೆ, ಪುರಸಭೆ ಉಪಾಧ್ಯಕ್ಷ ಫಿರ್ಧೋಸ್ ಆಡೂರ, ಸದಸ್ಯರಾದ ಎಸ್.ಕೆ. ಹವಾಲ್ದಾರ, ಮುಸ್ತಾಕ್‌ಅಹ್ಮದ್ ಶಿರಹಟ್ಟಿ, ಸಿಕಂದರ ಕಣಕೆ, ಡಿ.ಜೆ. ಮುಚ್ಚಾಲೆ, ವೀರಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ಜಾಕೀರಹುಸೇನ್ ಹವಾಲ್ದಾರ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಅಬ್ದುಲ್‌ಕರೀಂ ಸೂರಣಗಿ, ಎನ್.ಎಂ. ಗದಗ, ದಾದಾಪೀರ ತಂಬಾಕದ, ಇಕ್ಬಾಲ್ ಸೂರಣಗಿ, ಜಮೀಲ್ ಸೂರಣಗಿ, ಪೈಮ್ ಪಲ್ಲಿ, ಅಬ್ಜಲ್ ರಿತ್ತಿ ಮುಂತಾದವರಿದ್ದರು.

ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರು ಜನತೆಗೆ ಸಿಹಿ, ಹಣ್ಣು, ತಂಪುಪಾನೀಯ ವಿತರಿಸಿದರು. ಹಬ್ಬದ ಅಂಗವಾಗಿ ಪಟ್ಟಣದಲ್ಲಿರುವ ಮಸೀದಿ, ತಮ್ಮ ಅಂಗಡಿ, ಮನೆಗಳಿಗೆ ವಿದ್ಯುತ್, ಪುಷ್ಪಾಲಂಕಾರ ಮಾಡಲಾಗಿತ್ತು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!