ಎಲ್ಲವನ್ನೂ ನಿಮ್ಮ ಬಳಿ ಹೇಳ್ಕೋಬೇಕಾ!? ರಾಹುಲ್ ಗಾಂಧಿ ಭೇಟಿ ಬಗ್ಗೆ ಡಿಸಿಎಂ ಪ್ರತಿಕ್ರಿಯೆ!

0
Spread the love

ಬೆಂಗಳೂರು:- ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡೋಕೆ ಯಾರ ಅನುಮತಿ ಅಗತ್ಯ ಇಲ್ಲ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.

Advertisement

ವಿದೇಶದಿಂದ ವಾಪಸ್‌ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ನಮ್ಮ ಲೀಡರ್, ನಮ್ಮ ಪಾರ್ಟಿ ನನ್ನಿಷ್ಟ, ಭೇಟಿ ಮಾಡೋಕೆ ಯಾರ ಅನುಮತಿ ಕೇಳಬೇಕು? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಶಾಸಕ ಮುನಿರತ್ನ ಅವರ ಬಂಧನದ ವಿಚಾರವಾಗಿ, ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಈ ಬಗ್ಗೆ ಬಿಜೆಪಿಯ ಆರ್.ಆಶೋಕ್, ವಿಜಯೇಂದ್ರ, ಇನ್ನೂ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಅಲ್ಲದೇ ಆ ಸಮುದಾಯದ ಮುಖ್ಯಸ್ಥರು, ಸ್ವಾಮಿಗಳು ಅವರೆಲ್ಲ ಮಾತಾಡಬೇಕು. ಸರಿ ಇದ್ದರೆ ಸರಿ, ತಪ್ಪಿದ್ದರೆ ತಪ್ಪು ಎಂದು ಹೇಳಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.

ಇನ್ನೂ ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಗಲಭೆ ವಿಚಾರವಾಗಿ, ಸರ್ಕಾರ ಇದನ್ನು ನಿಭಾಯಿಸುತ್ತದೆ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here