Homecultureವಿಶ್ವಕರ್ಮ ಸಮಾಜದ ಕೊಡುಗೆ ಹಿರಿದು : ಬಸವರಾಜ ಬಳಗಾನೂರ

ವಿಶ್ವಕರ್ಮ ಸಮಾಜದ ಕೊಡುಗೆ ಹಿರಿದು : ಬಸವರಾಜ ಬಳಗಾನೂರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಜಗತ್ತಿನ ಸೃಷ್ಟಿ ವಿಶ್ವಕರ್ಮಮನಿಂದಾಗಿದ್ದು, ವಿಶ್ವಕರ್ಮರು ಕಾಯಕ ಸಂಸ್ಕೃತಿಯನ್ನು ರೂಢಿಸಿಕೊಂಡು ಕಲೆ, ಶಿಲ್ಪಕಲೆ, ಸಂಗೀತ ಹೀಗೆ ಎಲ್ಲಾ ರಂಗಗಳಲ್ಲೂ ತಮ್ಮ ಸೂಕ್ಷ್ಮ ಕಲಾ ಪ್ರೌಢಿಮೆಯಿಂದ ಜಗತ್ತಿಗೆ ಅಮೋಘವಾದ ಕೊಡುಗೆ ನೀಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮಾಜ ಇಂದು ಕುಶಲಕರ್ಮಿಗಳಾಗಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆಯನ್ನು ಗುರುತಿಸಿಕೊಟ್ಟ ಏಕೈಕ ಸಮಾಜವೆಂದರೆ ವಿಶ್ವಕರ್ಮ ಸಮಾಜ ಎಂದು ಬಣ್ಣಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆಯು ಸಕಲವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ನಡೆಯಿತು. ನಂತರ ಮೌನೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮರಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನಡೆಯಿತು.

ನಂತರ ದೇವಸ್ಥಾನದ ಬಳಿ ಸಕಲ ಸದ್ಭಕ್ತರಿಗೆ ಮಹಾಪ್ರಸಾದ ವಿತರಣೆ ಜರುಗಿತು. ಈ ವೇಳೆ ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಬಡಿಗೇರ ಪುರಸಭೆ ಸದಸ್ಯ ಕನಕಪ್ಪ ಅರಳಿಗಿಡದ, ಹನಮಂತ ಮುದಗಲ್, ಶ್ರೀನಿವಾಸ ಸವದಿ, ವೀರೇಶ ಬಡಿಗೇರ, ರಂಗು ಕಮ್ಮಾರ, ಮಂಜು ಬಡಿಗೇರ, ವಿಠ್ಠಲ ಸವದಿ, ಎಚ್.ಎನ್.ಬಡಿಗೇರ, ಮೊನೇಶ ಗೋಗೇರಿ, ಮೌನೇಶ ಡಂಬಳ, ಮಲ್ಲಪ್ಪ ಬಡಿಗೇರ, ಮೌನೇಶ ಪತ್ತಾರ, ಪರುಶರಾಮ ಕಮ್ಮಾರ ಹಾಗೂ ಪುರಸಭೆಯ ಅಧಿಕಾರಿಗಳಾದ ಸಿ.ಡಿ. ದೊಡ್ಡಮನಿ, ಶಿವಪುತ್ರಪ್ಪ ಕಡೆತೋಟದ, ಜಿ.ಎನ್. ಕಾಳೆ, ಶಿವಕುಮಾರ ಇಲಾಳ, ಬಿ. ಮಲ್ಲಿಕಾರ್ಜುನಗೌಡ, ಎಂ.ಬಿ. ದೊಡ್ಡಮನಿ, ಗುರಪ್ಪ ಪಟ್ಟಣಶೆಟ್ಟಿ, ರಿಯಾಜ ಒಂಟಿ, ರಾಘವೇಂದ್ರ ಮಂತಾ, ಪಿ.ಎನ್. ದೊಡ್ಡಮನಿ ಸೇರಿ ಇತರರು ಇದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!