ಡಿವೈಡರ್ʼಗೆ ಡಿಕ್ಕಿಯಾಗಿ ಕಾರ್ ಪಲ್ಟಿ: ಭೀಕರ ಅಪಘಾತದ ದೃಶ್ಯ CCTVಯಲ್ಲಿ ಸೆರೆ

0
Spread the love

ಕೋಲಾರ‌: ಡಿವೈಡರ್ ಗೆ ಡಿಕ್ಕಿಯಾಗಿ ಕಾರ್ ಪಲ್ಟಿಯಾಗುವ ಘಟನೆ ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಮಾಲೂರು ಬೆಂಗಳೂರು ರಸ್ತೆಯಲ್ಲಿನ ವಂಶೋದಯ ಆಸ್ಪತ್ರೆ ಎದುರಿಗೆ ನಡೆದಿದೆ. ಇನ್ನೂ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಕೋಡಾ ಕಾರ್ ಡಿವೈಡೆರ್ ಗೆ ಡಿಕ್ಕಿಯಾಗಿ ಮೂರು ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರ್ ನಲ್ಲಿದ್ದ ಯಾರಿಗೂ ಸಹ ಏನೂ ತೊಂದರೆ ಆಗಿಲ್ಲ,

Advertisement

ಕಾರ್ ನಲ್ಲಿದ್ದ ಸದಾನಂದ್ ಹಾಗೂ ಅವರ ಪತ್ನಿ ಇಬ್ಬರು ಮಕ್ಕಳಿದ್ದರು ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ . ರಸ್ತೆಯಲ್ಲಿ ಇದ್ದಂತಹ ಗುಂಡಿಯನ್ನು‌ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದು ಜುಲೈ ತಿಂಗಳಲ್ಲಿ ನಡೆದಿರುವ ಘಟನೆಯಾಗಿದೆ.


Spread the love

LEAVE A REPLY

Please enter your comment!
Please enter your name here