Homecultureಧರ್ಮ ಸಮ್ಮೇಳನ ನಾಡಿನ ಹಬ್ಬವಾಗಿದೆ

ಧರ್ಮ ಸಮ್ಮೇಳನ ನಾಡಿನ ಹಬ್ಬವಾಗಿದೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇಲ್ಲಿಗೆ ಸಮೀಪದ ಅಬ್ಬಿಗೇರಿಯಲ್ಲಿ ಅಕ್ಟೋಬರ್ 3ರಿಂದ ಜರುಗಲಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದಸರಾ ದರ್ಬಾರ್ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ದಸರಾ ಧರ್ಮ ಸಮ್ಮೇಳನದ ವಾಲ್ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಧರ್ಮ ಸಮ್ಮೇಳನ ನಾಡಿನ ಹಬ್ಬವಾಗಿದ್ದು, ಇದು ಗುರುಮನೆ ದಸರಾ ಆಗಿದೆ. ಎಲ್ಲರ ತ್ರಿಕರಣ ಸೇವೆಯಿಂದ ಈ ಮಹಾ ಸಮ್ಮೇಳನ ಯಶಸ್ವಿಯಾಗುವದು. ಈ ಕೈಂಕರ್ಯದಲ್ಲಿ ಎಲ್ಲರ ಸೇವೆ ಅಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಾಕ್ಷಯ್ಯ ಅರಳೆಲೆಮಠ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಬಾಬುಗೌಡ ಪಾಟೀಲ, ಎ.ವಿ. ವೀರಾಪೂರ, ಗುರಣ್ಣ ಅವರಡ್ಡಿ, ಮಂಜು ಅಂಗಡಿ, ಸಿದ್ದು ಹನುಮನಾಳ, ಮಹದೇವಪ್ಪ ಕಂಬಳಿ, ಹನುಮಂತ ದ್ವಾಸಲ, ರಾಮನಗೌಡ ಹಲಕುರ್ಕಿ, ವಿಜಯಕುಮಾರ ಹಿರೇಮಠ, ಈಶಪ್ಪ ನೀರಲೋಟಿ, ದೇವನಗೌಡ ಮುನೇನಕೊಪ್ಪ, ವಿನಾಯಕ ಜೋಶಿ, ಬಸವರಾಜ ಕಮ್ಮಾರ, ಮಲ್ಲೇಶಪ್ಪ ಗದುಗಿನ, ಮಂಜು ಚಿತ್ತರಗಿ, ಭರಮಪ್ಪ ಹನುಮನಾಳ, ಶಿವಣ್ಣ ಗುಗ್ಗರಿ, ದುರುಗೇಶ ಬಂಡಿವಡ್ಡರ, ಸೋಮನಗೌಡ ಕಣವಿ, ರಾಜು ಬೆಂಗಳೂರಶೆಟ್ರ, ಬಸವರಾಜ ಚವಡಿ, ಪ್ರಭು ಸಂಗಟಿ, ಕುಮಾರ ಭೀಮನಗೌಡ್ರ, ಈರಣ್ಣ ಸೊಂಪುರ ಸೇರಿದಂತೆ ಇತರರಿದ್ದರು.

ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಮಾನವನು ಧರ್ಮದಲ್ಲಿರಬೇಕು, ಧರ್ಮ ಪರಿಪಾಲನೆ ಮಾಡಬೇಕು. ಆ ಧರ್ಮವು ವಿಶ್ವದಲ್ಲಿ ಶಾಂತಿ ನೆಲೆಸುವಂತಿರಬೇಕು. ಇಂತಹ ಮಾನವೀಯ ಮೌಲ್ಯಗಳನ್ನು ಬಿತ್ತಲು ಧರ್ಮ ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img