ಸಂಪ್ರದಾಯಬದ್ಧ ಅದ್ಧೂರಿ ಗಣೇಶ ವಿಸರ್ಜನೆ

0
Farewell to Ganesha idol installed near Someshwara Terinamane
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಅನೇಕ ಸಾರ್ವಜನಿಕ ಗಜಾನನೋತ್ಸವ ಸಮಿತಿಗಳು ಈ ಬಾರಿ ಸಾಂಪ್ರದಾಯಿಕವಾಗಿ ಹಾಗೂ ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಗಣೇಶ ವಿಜರ್ಸನೆಯನ್ನು ಸಹ ಅಷ್ಟೇ ವಿಜ್ರಂಭಣೆಯಿಂದ ನೆರವೇರಿಸುತ್ತಿದ್ದು, ಹೊಸ ಹೊಸ ಸಾಂಸ್ಕೃತಿಕ ಕಲಾ ತಂಡಗಳನ್ನು ಕರೆಯಿಸುತ್ತಿರುವದು ಸಹ ಎಲ್ಲರ ಗಮನ ಸೆಳೆಯುತ್ತಿದೆ. ಪಟ್ಟಣದ ಸೋಮೇಶ್ವರ ತೇರಿನಮನೆಯ ಹತ್ತಿರ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಅದ್ದೂರಿಯಾಗಿ ಅನೇಕ ಕಲಾತಂಡಗಳ ಪ್ರದರ್ಶನಗಳ ಮೂಲಕ ವಿಸರ್ಜಿಸಲಾಯಿತು.

Advertisement

ಮೆರವಣಿಗೆಯಲ್ಲಿ ರಾಮನಭಕ್ತ ಹನುಮಂತನ ವೇಷಧಾರಿ ಬೃಹತ್ ವೇಷ ಧರಿಸಿ ಅವರೊಂದಿಗೆ ವಾನರ ವೇಷ ಧರಿಸಿದ್ದ ಕಲಾವಿದರು ರಾಮನಾಮ ಭಜನೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮೆರವಣಿಗೆಯ ರಂಗು ಹೆಚ್ಚಿದಂತೆ ಅನೇಕರು ತಾವೂ ಅದರೊಂದಿಗೆ ನರ್ತಿಸಿದರು. ಸೂರಶೆಟ್ಟಿಕೊಪ್ಪದ ಜಗ್ಗಲಗಿ ಮೇಳದ ಜಗ್ಗಲಗಿ ಸದ್ದಿಗೆ ಯುವ ಪಡೆ ಅವರೊಂದಿಗೆ ಕುಣಿದು ಸಂಭ್ರಮಿಸಿದರು. ಸಾಗರ ತಾಲೂಕು ಗುಬ್ಬಿಯ ಶ್ರೀಕುಮಾರೇಶ್ವರ ಜಾನಪದ ಡೊಳ್ಳಿನ ತಂಡ, ವೀರಗಾಸೆ ಕುಣಿತ, ಯಕ್ಷಗಾನ ನೃತ್ಯ ಮೆರವಣಿಗೆಯ ರಂಗನ್ನು ಹೆಚ್ಚಿಸಿದ್ದವು.

ಇಂತಹ ವಿಶೇಷ ತಂಡವನ್ನು ಕರೆಸುವ ಮೂಲಕ ಗಜಾನನೋತ್ಸವ ಸಮಿತಿಯವರು ಪಟ್ಟಣದ ಜನರ ಮೆಚ್ಚುಗೆಗೆ ಪಾತ್ರರಾದರು. ಇದರ ಜೊತೆ ಬೃಹತ್ ಗೊಂಬೆಗಳು ಮೆರವಣಿಗೆಗೆ ವಿಶೇಷ ಆಕರ್ಷಣೆ ನೀಡಿದವು.

Farewell to Ganesha idol installed near Someshwara Terinamane

ಈ ಸಂದರ್ಭದಲ್ಲಿ ಚನ್ನಪ್ಪ ಜಗಲಿ, ಶಿವಯೋಗಿ ಅಂಕಲಕೋಟಿ, ಬಸವೇಶ ಮಹಾಂತಶೆಟ್ಟರ, ವಿ.ಎಲ್. ಪೂಜಾರ, ಮಹಾದೇವಪ್ಪ ಅಣ್ಣಿಗೇರಿ, ನಿಂಗಪ್ಪ ಬನ್ನಿ, ಕುಬೇರಪ್ಪ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಗುರಣ್ಣ ಪಾಟೀಲಕುಲಕರ್ಣಿ, ಅಶೋಕಗೌಡ ಪಾಟೀಲ, ಸುರೇಶ ರಾಚನಾಯಕರ್, ಸಿದ್ದನಗೌಡ ಬಳ್ಳೊಳ್ಳಿ, ಶೇಕಪ್ಪ ಹುರಕಡ್ಲಿ, ವಿರುಪಾಕ್ಷ ಆದಿ, ಸುರೇಶ ಚೌಕನವರ, ಗಂಗಾಧರ ಉಮಚಗಿ, ರಾಮಣ್ಣ ಗೌರಿ, ಸಂತೋಷ ಜಾವೂರ ಸೇರಿದಂತೆ ಮತ್ತಿತರರು ಇದ್ದರು.

ಗಣೇಶ ವಿಸರ್ಜನಾ ಮೆರವಣಿಗೆಗೆ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಚಾಲನೆ ನೀಡಿದರು. ನಂತರ ಸೋಮೇಶ್ವರ ತೇರಿನ ಮನೆಯಿಂದ ಆರಂಭವಾದ ಭವ್ಯ ಮೆರವಣಿಗೆ ಬಳಿಗಾರ ಓಣಿ, ಪೇಟೆ ಹನುಮಂತದೇವರ ದೇವಸ್ಥಾನ, ಪುರಸಭೆ ಮೂಲಕ ಹಾಯ್ದು ಇಟ್ಟಿಗೆರೆ ಬಳಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೊಂಡದಲ್ಲಿ ಗಣೇಶನ ವಿಸರ್ಜನೆಯನ್ನು ಸಂಪ್ರದಾಯಬದ್ಧವಾಗಿ ನಡೆಸಲಾಯಿತು.


Spread the love

LEAVE A REPLY

Please enter your comment!
Please enter your name here