ರಾಯಚೂರು: ಖಾಸಗಿ ಬಸ್ ಡಿಕ್ಕಿ ಹೊಡೆದು 125 ಕುರಿಗಳು ಸಾವನ್ನಪ್ಪಿರುವ ಘಟನೆ ಬೆಳಗಿನ ಜಾವ ಯರಮರಸ್ ನ ಬೈ ಪಾಸ್ ಬಳಿ ನಡೆದಿದೆ.
Advertisement
ಘಟನೆಯಲ್ಲಿ 125 ಕುರಿ ಸಾವು ಹಾಗೂ 18 ಕುರಿಗಳಿಗೆ ಗಾಯಗಳಾಗಿವೆ. ತೆಲಂಗಾಣ ರಾಜ್ಯದ ಮಕ್ತಲ್ ನ ಓಬಳಾಪುರಂ ಗ್ರಾಮದ ಮಲ್ಲೇಶ್, ಸೀನಪ್ಪ, ಬಾಲರಾಜು ಎಂಬುವವರಿಗೆ ಸೇರಿದ ಕುರಿಗಳಾಗಿದ್ದು,
ಹೈದರಾಬಾದ್ ನಿಂದ ಬೆಳಗಾವಿ ಕಡೆ ಹೊಗುತ್ತಿದ್ದ ವಿಆರ್ ಎಲ್ ಬಸ್ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಕೂದಳೆ ಅಂತರದಲ್ಲಿ ಕುರಿಗಾಹಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.