ಮೈಸೂರು: ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಕಬಿನಿ ಮೇಲ್ಸೇತುವೆ ಬಳಿ ನಡೆದಿದೆ. ಮಲ್ಲಿಕಾರ್ಜುನ್ ಮೃತ ದುರ್ಧೈವಿಯಾಗಿದ್ದು, ಕೇತಳ್ಳಿ ಗ್ರಾಮದ ಮಲ್ಲೇಶ್ ಎಂಬುವರ ಪುತ್ರ ನಾಗಿದ್ದು, ಮೊಬೈಲ್, ಬಟ್ಟೆ ಸೇತುವೆ ಮೇಲೆ ಇಟ್ಟು ನದಿಗೆ ಹಾರಿದ್ದಾನೆ.
Advertisement
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ನರಸೀಪುರ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ಅಗ್ನಿಶಾಮಕ ದಳ ಸಿಬ್ಬಂದಿ, ನುರಿತ ಈಜುಗಾರರಿಂದ ಯುವಕನ ಶವಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಟಿ ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.