ಕೋಲಾರ:-ಕೋಲಾರ ತಾಲ್ಲೂಕು ಮುದುವತ್ತಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಸೂಸೈಡ್ ಮಾಡಿಕೊಂಡಿದ್ದು, ಹೆಂಡತಿ ಮನೆಯವರ ಕಿರುಕುಳ ಎಂದು ಆರೋಪಿಸಿ ವಿಡಿಯೋ ಮಾಡಿ ಪ್ರಾಣ ಬಿಟ್ಟಿದ್ದಾನೆ.
Advertisement
31 ವರ್ಷದ ಶ್ರೀಕಾಂತ್ ಮೃತ ವ್ಯಕ್ತಿ ಎನ್ನಲಾಗಿದೆ. ಮೃತ ಶ್ರೀಕಾಂತ್ ವಿಡಿಯೋದಲ್ಲಿ ತನ್ನ ಪತ್ನಿ ಪಾವನ ಹಾಗೂ ಅವರ ತಂದೆ ತರಕಾರಿ ಯಲ್ಲಪ್ಪ ಕುಟುಂಬಸ್ಥರಿಂದ ಕಿರುಕುಳ ಹಾಗೂ ಜೀವ ಬೆದರಿಕೆ ಎಂದು ಆರೋಪಿಸಿದ್ದಾರೆ.
ಮಾರ್ಕಂಡೇಶ್ವರ ಬೆಟ್ಟದಲ್ಲಿ ನೇಣುಬಿಗಿದು ಕೊಂಡು ಶ್ರೀಕಾಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.