ಹುಬ್ಬಳ್ಳಿ: ಸಿಎಂ ತಪ್ಪು ಮಾಡಿಲ್ಲ ಅಂದರೆ ಸಿಬಿಐಗೆ ಪ್ರಕರಣ ನೀಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ತಪ್ಪು ಮಾಡಿಲ್ಲ ಅಂದರೆ ಸಿಬಿಐಗೆ ಪ್ರಕರಣ ನೀಡಿ. ಕಾಂಗ್ರೆಸ್‌ನವರಿಗೆ ಸಿಬಿಐ ಭಯ ಕಾಡುತ್ತಿದೆ. ಕಾಂಗ್ರೆಸ್ ಪಾರ್ಟಿಯಲ್ಲಿ ಕುಟುಂಬ ಪ್ರಜಾಪ್ರಭುತ್ವ ಇದೆ.
Advertisement
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮಾತ್ರ ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವ. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಸ್ವತಃ ಸಿಎಂ ಅವರೇ ವರ್ಗಾವಣೆ ಮಾಡಿದ್ದಾರೆ. ನೈತಿಕವಾಗಿ ಕಾಂಗ್ರೆಸ್ ದಿವಾಳಿಯಾಗಿದೆ. ಈ ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.