HomeGadag Newsಶರಣ ಸಂಗಮ ಕಾರ್ಯಕ್ರಮ ಇಂದು

ಶರಣ ಸಂಗಮ ಕಾರ್ಯಕ್ರಮ ಇಂದು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಸೆ. 29ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಬಸವದಳದ 1613ನೇ ಶರಣ ಸಂಗಮದಲ್ಲಿ ಶರಣ ಹೂಗಾರ ಮಾದಯ್ಯನವರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಶರಣ ಎಸ್.ಎನ್. ಹಕಾರಿ ವಹಿಸುವರು. ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯ ಶರಣ ಮಂಜುನಾಥ ಬಿ.ಹೂಗಾರ ಗಜೇಂದ್ರಗಡ ಉಪನ್ಯಾಸ ಮಾಡುವರು.

ಅತಿಥಿಗಳಾಗಿ ಗದಗ ಜಿಲ್ಲಾ ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಶರಣ ಬಸವರಾಜ ಎಚ್.ಹೂಗಾರ, ಕಾರ್ಯದರ್ಶಿ ಶರಣ ವೀರಣ್ಣ ಆರ್.ಹೂಗಾರಶರಣ ಎಂ. ಬಿ. ಹೂಗಾರ, ಶರಣೆ ಗಂಗಮ್ಮ ಹೂಗಾರ ಇವರುಗಳು ಆಗಮಿಸುವರು.

ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img