ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ, ಗ್ರಾಮದ ಹುಲಿಗೇಪ್ಪ (20) ಮೃತ ದುರ್ದೈವಿಯಾಗಿದ್ದು, ಅತ್ತೆ – ಅಳಿಯನ ನಡುವೆ ಜಗಳ ನಡೆದಿದ್ದು, ಅತ್ತೆಯ ಬೆದರಿಕೆಗೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾನೆ.
ಡೆತ್ ನೋಟ್ನಲ್ಲಿ ಜಾಗದ ವಿಚಾರವಾಗಿ ಅತ್ತೆ ಲಕ್ಷ್ಮಿ, ಅತ್ತೆಯ ಮಗಳ ಅನುರಾಧ, ಮಹಾದೇವಿ, ಅನಿಲ್ ಎಂಬುವವರ ಹೆಸರು ಪ್ರಸ್ತಾಪ ಮಾಡಿದ್ದಾನೆ. ನನ್ನ ಸಾವಿಗೆ ನನ್ನ ಅತ್ತೆ ಲಕ್ಷ್ಮಿದೇವಿ ಮತ್ತು ಆಕೆಯ ಮಕ್ಕಳೇ ಕಾರಣ. ನಮ್ಮ 17 ಗುಂಟೆ ಜಾಗ ತಮ್ಮದು ಎಂದು ನಮಗೆ ಬೆದರಿಕೆ ಹಾಕಿದ್ದಾರೆ. ನನ್ನ ಸಾವಿನ ಬಳಿಕವಾದರೂ ನಮ್ಮ ಜಾಗ ನಮಗೆ ಕೊಡಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಘಟನೆ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.