ಬಳ್ಳಾರಿ: ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದ ನಡೆಯುತ್ತಿದೆ. ಇದರ ಬೆನ್ನಲ್ಲೇ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್ ಭೇಟಿ ಆಗಿದ್ದರು ಸಂಗೀತ ನಿರ್ದೇಶಕರು ದರ್ಶನ್ಗಾಗಿ ಡ್ರೈ ಫ್ರೂಟ್ಸ್, ಬೇಕರಿ ತಿನಿಸು, ಬಟ್ಟೆ ತಂದಿದ್ದರು. ಜೈಲು ಸಿಬ್ಬಂದಿ ಬ್ಯಾಗ್ ಚೆಕ್ ಮಾಡಿ ಬಳಿಕ ಒಳಗೆ ಬಿಟ್ಟ ನಂತರ,
ಹೈ ಸೆಕ್ಯೂರಿಟಿ ಸೆಲ್ನಿಂದ ವಿಸಿಟರ್ ಕೊಠಡಿಗೆ ದರ್ಶನ್ ಆಗಮಿಸಿ, ಈ ಐವರನ್ನು ಭೇಟಿ ಮಾಡಿದರು. ದರ್ಶನ್ ಭೇಟಿ ಬಳಿಕ ಜೈಲಿನಿಂದ ಮೊದಲು ಹರಿಕೃಷ್ಣ ಮತ್ತು ಶೈಲಜಾನಾಗ್ ಹೊರಬಂದರು. ನಂತರ ಸ್ನೇಹಿತರಾದ ಅರವಿಂದ್, ಆಕಾಶ್, ಫ್ರಭು ಜೊತೆ ಮಾತುಕತೆ ನಡೆಸಿದರು. ಸಂದರ್ಶಕರ ಕೊಠಡಿಯಿಂದ ಹೈ ಸೆಕ್ಯುರಿಟಿ ಸೆಲ್ಗೆ ವಾಪಸ್ ಹೋಗುವ ವೇಳೆಯೂ ಡಿ ಬಾಸ್ ಅಂತಾ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.



