ಬೆಂಗಳೂರು: ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ಎಸ್ಎಸ್ಎಂಆರ್ವಿ ಪದವಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಶಬಾನಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೊಫೆಸರ್ ಆಗಿದ್ದು,
Advertisement
ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನ ಆರೋಪ ಮಾಡಲಾಗಿದೆ. ಅಸ್ವಸ್ಥಗೊಂಡ ಪ್ರಾಧ್ಯಾಪಕಿ ಶಬಾನಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಸ್ಥಳಕ್ಕೆ ತಿಲಕ್ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.