• About
  • Advertise
  • Privacy & Policy
  • Contact
Wednesday, November 4, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home culture

ನಂಬಿಕೆಯಿಂದ ಸಂಬಂಧಗಳು ಗಟ್ಟಿಯಾಗುತ್ತವೆ : ರಂಭಾಪುರಿ ಶ್ರೀಗಳು

News Desk by News Desk
October 15, 2024
in culture
Vijay Dashami celebration
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಅಬ್ಬಿಗೇರಿ : (ಮಾನವ ಧರ್ಮ ಮಂಟಪ)
ಆಧುನಿಕ ಯುಗದಲ್ಲಿ ಮಾನವೀಯ ಸುಮಧುರ ಸಂಬಂಧಗಳು ಕಡಿಮೆಯಾಗುತ್ತಿವೆ. ಮರಕ್ಕೆ ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ. ಅದೇ ರೀತಿ ಜೀವನದಲ್ಲಿ ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯಲಾರವು. ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಸಂಬಂಧಗಳನನ್ನು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆಯೆಂದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶ್ರೀ ಅನ್ನದಾನೇಶ್ವರ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದಲ್ಲಿ ಶಮೀ ಪೂಜೆ ನೆರವೇರಿಸಿ, ಸಿಂಹಾಸನಾರೋಹಣ ಮಾಡಿ, ಶಾಂತಿ ಸಂದೇಶ ಅನುಗ್ರಹಿಸುತ್ತಿದ್ದರು.

ಆತ್ಮ ಶಕ್ತಿ ಇರುವವನನ್ನು ಯಾವ ದುಷ್ಟ ಶಕ್ತಿಯೂ ನಾಶಗೊಳಿಸಲಾರದು. ಬೆಂಕಿಯಲ್ಲಿ ಚಿನ್ನ ಸುಡುತ್ತಿದ್ದರೂ ಕಪ್ಪಾಗದೇ ಹೊಳೆಯುವಚಿತೆ, ಸಜ್ಜನರು ಎಷ್ಟೇ ತೊಂದರೆಯಾದರೂ ಸ್ವಾಭಿಮಾನದಿಂದ ಬಾಳಿ ಬದುಕುತ್ತಾರೆ.

ಕೆಟ್ಟವರು ಒಳ್ಳೆಯವರನ್ನು ನಿಂದಿಸುವುದು ಆಗಸಕ್ಕೆ ಉಗುಳಿದಂತೆ. ಆ ಉಗುಳು ಉಗಿದವನ ಮುಖದ ಮೇಲೆ ಬೀಳುತ್ತದೆಯೇ ಹೊರತು ಒಳ್ಳೆಯವರಿಗೆ ತಾಗುವುದಿಲ್ಲ. ಮನುಷ್ಯ ಜೀವನದಲ್ಲಿ ಎಷ್ಟೇ ಬೆಳೆದು ಬಲಗೊಂಡರೂ ಮೂಲವನ್ನು ಮರೆಯಬಾರದು. ಧರ್ಮ ಪರಂಪರೆ, ಸಂಸ್ಕೃತಿ ಮಾನವನ ಅಭ್ಯುದಯಕ್ಕಾಗಿ ಮತ್ತು ಶ್ರೇಯಸ್ಸಿಗಾಗಿ ಇರುತ್ತವೆಯೇ ಹೊರತು ಅವನತಿಗಲ್ಲ.

ಅರಿತು ಬಾಳುವುದರಿಂದ ಬದುಕು ಬಂಗಾರಗೊಳ್ಳುತ್ತದೆ. ಹಣದಿಂದ ಎಲ್ಲವೂ ಸಿಗುವುದೆಂಬ ಭ್ರಮೆ ಇರಬಾರದು.

ಹಣದಿಂದ ಔಷಧಿ ಕೊಳ್ಳಬಹುದು. ಆದರೆ ಆರೋಗ್ಯ ಕೊಳ್ಳಲಾಗದು. ಹಣದಿಂದ ಆಹಾರ ಕೊಳ್ಳಬಹುದು, ಆದರೆ ಪಚನಶಕ್ತಿ ಕೊಳ್ಳಲಾಗದು. ಹಣದಿಂದ ಹಾಸಿಗೆ ಕೊಳ್ಳಬಹುದು, ಆದರೆ ನಿದ್ದೆ ಕೊಳ್ಳಲಾಗದು. ಹಣದಿಂದ ಪುಸ್ತಕ ಕೊಳ್ಳಬಹುದು, ಅದರೆ ಜ್ಞಾನ ಕೊಳ್ಳಲಾಗದು. ಹಣದಿಂದ ಮನೆ ಕೊಳ್ಳಬಹುದು, ಆದರೆ ಮನದ ಶಾಂತಿ ಕೊಳ್ಳಲಾಗದು. ಹಣದಿಂದ ವಸ್ತುವನ್ನು ಕೊಳ್ಳಬಹುದು ಅದರೆ ಸತ್ಯವನ್ನು ಎಂದಿಗೂ ಕೊಳ್ಳಲಾಗದು. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕಾಗುತ್ತದೆ.

ಶಾಸಕ ಜಿ.ಎಸ್. ಪಾಟೀಲ ಕೃತಜ್ಞತಾ ನುಡಿ ನುಡಿದರು. ಸಿದ್ಧರಬೆಟ್ಟ ಶ್ರೀಗಳು ಸಮಾರಂಭದ ಯಶಸ್ಸಿಗಾಗಿ ಕಾರಣರಾದ ಸಮಸ್ತರಿಗೂ ದಾಸೋಹ ದಾನಿಗಳಿಗೂ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅಬ್ಬಿಗೇರಿ ಹಿರೇಮಠದ-ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳಿಗೆ `ಸಂಸ್ಕೃತಿ ಸಂವರ್ಧನ ರತ್ನ’ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಶಾಸಕರಾದ ಜಿ.ಎಸ್. ಪಾಟೀಲ ಹಾಗೂ ದಸರಾ ಮಹೋತ್ಸವದ ಪದಾಧಿಕಾರಿಗಳು ಶ್ರಿ ರಂಭಾಪುರಿ ಜಗದ್ಗುರುಗಳಿಗೆ ಬಿನ್ನವತ್ತಳೆ, ಕಾಣಿಕೆ, ರೇಷ್ಮೆ ಶಾಲು, ಫಲ-ಪುಷ್ಪ, ತಾಂಬೂಲ ಸಮರ್ಪಿಸಿ ಗೌರವಿಸಿದರು. ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ವಾರ್ತಾ ಕಾರ್ಯದರ್ಶಿ ಡಾ. ಗುರುಮೂರ್ತಿ ಯರಗಂಬಳಿಮಠ, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ಡಾ. ಗುರುಪಾದಯ್ಯ ಸಾಲಿಮಠ, ಶಾಂತಾ ಆನಂದ, ವೀರೇಶ ಕಿತ್ತೂರ, ಬಸವರಾಜ ವೀರಾಪುರ, ಬಾಬುಗೌಡ್ರ ಪಾಟೀಲ, ವರ್ಮಪ್ಪ ಹನಮನಾಳ, ಮಂಜುನಾಥ ಅಂಗಡಿ, ಅಂದಪ್ಪ ವೀರಾಪುರ, ಬಸವರಾಜ ಪಲ್ಲೇದ, ಮಲ್ಲಿಕಾರ್ಜುನ ಹರ್ಲಾಪುರ, ಸುರೇಶ ನಾಯಕ, ಸಿವಪ್ಪ ಶಿದ್ನೇಕೊಪ್ಪ, ಗುರಣ್ಣ ಅವರಕಿ, ಸೋಮನಗೌಡ ಕಣವಿ, ಭೀಮಣ್ಣ ಕಂಬಳಿ ಇದ್ದರು. ವೀರಯ್ಯ ಬಿ.ಸೋಮನಕಟ್ಟಿಮಠ ಸರ್ವರನ್ನು ಸ್ವಾಗತಿಸಿದರು.

ಸಮಾರಂಭಕ್ಕೂ ಮುನ್ನ ಗ್ರ‍್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಅನ್ನದಾನೇಶ್ವರ ಪ್ರೌಢ ಶಾಲೆಯ ವರೆಗೆ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ನರೇಗಲ್ಲ, ಎಡೆಯೂರು, ಮಳಲಿ, ಸಂಗೊಳ್ಳಿ, ಹಂಪಸಾಗರ, ಕವಲೇದುರ್ಗ, ಪುರಗಿರಿ, ಹರಗಿನಡೋಣಿ, ದೊಡ್ಡಸಗರ, ತಮ್ಮಡಿಹಳ್ಳಿ, ಜಿಗೇರಿ ಮಠಾಧೀಶರು, ಬನಸವರಾಜ ಶರಣರು ಪಾಲ್ಗೊಂಡಿದ್ದರು.

ಬೆಳಿಗ್ಗೆ ಅಬ್ಬಿಗೇರಿ ಮೂಲ ಮಠದಿಂದ ಹೊಸ ಹಿರೇಮಠಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭಕ್ತರೊಡನೆ ಪೂಜೆಗಾಗಿ ಅಗ್ರೋದಕ ಹೊತ್ತು ನಡೆದರು. ಸಾವಿರಾರು ಭಕ್ತರು ಕುಂಭ ಹೊತ್ತು ಜಗದ್ಗುರುಗಳೊಂದಿಗೆ ಹೆಜ್ಜೆ ಹಾಕಿದ ಘಳಿಗೆ ಅವಿಸ್ಮರಣೀಯವಾಗಿತ್ತು.

ದಾಸೋಹ ಸೇವೆಯನ್ನು ಶರಣಪ್ಪ ಶಿವಪ್ಪ ಕಿಟಗೇರಿ, ಪ್ರಭು ವಿ.ಬೇವಿನಕಟ್ಟಿ, ಶಕುಂತಲಾ ಬಸಪ್ಪ ನಿಡಗುಂದಿ, ಬಾಬು ವೀರಭದ್ರಪ್ಪ ನಿರಲೋಟ, ಬಸವರಾಜ ಮಲ್ಲಾಪುರ, ಪರಪ್ಪ ಕಳಕಪ್ಪ ಮಾಳಶೆಟ್ಟಿ, ಎನ್.ಬಾಬು ನವರಂಗಿ ಬೆಂಗಳೂರು ಸಲ್ಲಿಸಿದರು.

ಮನುಷ್ಯ ಮನುಷ್ಯನನ್ನು ಪ್ರೀತಿ-ವಿಶ್ವಾಸ ಕಾಣುವಂತಾದರೆ ಸಮಾಜದಲ್ಲಿ ಯಾವುದೇ ಸಂಘರ್ಷಗಳು ಉಂಟಾಗಲಾರವು. ಸಹನೆ, ಸದ್ವಿನಯ ನಿನ್ನದಾದರೆ ಜೀವನದಲ್ಲಿ ಯಶಸ್ಸು ನಿಶ್ಚಿತ. ಅಸುರೀ ಶಕ್ತಿಗಳ ಜೊತೆ ಹೋರಾಡಿ ದೈವೀ ಶಕ್ತಿಗಳಿಗೆ ವಿಜಯವಾದ ದಿನವೇ ವಿಜಯ ದಶಮಿ ಆಚರಣೆಯಾಗಿದೆ. ಸ್ವಧರ್ಮದಲ್ಲಿ ನಿಷ್ಠೆ ಮತ್ತು ಪರಧರ್ಮದಲ್ಲಿ ಸಹಿಷ್ಣುತೆ ಹೊಂದಿ ಸಾಮರಸ್ಯದಿಂದ ಬಾಳಬೇಕೆಂದು ರಂಭಾಪುರಿ ಜಗದ್ಗುರುಗಳು ನುಡಿದರು.

Tags: abbigeriBalehonur Sri Rambhapuri Dr. Veerasomeshwara JagadguruGadaggadaganewsLatestNewsupdatenewsVijay Dashami celebration
ShareSendShare
Previous Post

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

Next Post

ರವಿವಾರ ಮುಂಜಾನೆ ಸಂಭ್ರಮದ ಕುಂಭೋತ್ಸವ

News Desk

News Desk

Next Post
Celebration Kumbhotsav as part of Maharathotsav of Goddess Annapurneswari

ರವಿವಾರ ಮುಂಜಾನೆ ಸಂಭ್ರಮದ ಕುಂಭೋತ್ಸವ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಟಿಪ್ಪರ್ ಲಾರಿ ಡಿಕ್ಕಿಗೆ ಮೂಡ್ಲಕಟ್ಟೆ ಕಾಲೇಜು ವಿದ್ಯಾರ್ಥಿ ಬಲಿ; ಮೂವರು ಆರೋಪಿಗಳ ಬಂಧನ

ಟಿಪ್ಪರ್ ಲಾರಿ ಡಿಕ್ಕಿಗೆ ಮೂಡ್ಲಕಟ್ಟೆ ಕಾಲೇಜು ವಿದ್ಯಾರ್ಥಿ ಬಲಿ; ಮೂವರು ಆರೋಪಿಗಳ ಬಂಧನ

November 3, 2026
ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬರಿಗೈಯಲ್ಲಿ ಬಂದಿಲ್ಲ, ₹2,328 ಕೋಟಿ ಅಭಿವೃದ್ಧಿ ಲಕ್ಷ್ಮಿ ತಂದಿದ್ದೇನೆ: ಹಿರಿಯೂರಿನಲ್ಲಿ ಸಿಎಂ ಡಿಕೆಶಿ ಘೋಷಣೆ

November 3, 2026
ರಾಜೀನಾಮೆ ಅಲ್ಲ.. ಸಂಪುಟದಿಂದಲೇ ಕೆ.ಎನ್. ರಾಜಣ್ಣ ವಜಾ..!

ಸ್ಟಿಂಗ್ ಆಪರೇಷನ್ʼಗೆ ಕರ್ನಾಟಕ ಮಾಡೆಲ್ ಎಂಬ ಅಪಕೀರ್ತಿ ಬರಲಿದೆ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ

November 3, 2026
ಪ್ರಜ್ವಲ್ ಮುಗಿಸಿ ಮಗನನ್ನ ಪ್ರತಿಷ್ಠಾಪಿಸಲು ಹೆಚ್‌ಡಿಕೆ ಯತ್ನಿಸುತ್ತಿದ್ದಾರೆ: ಬಾಲಕೃಷ್ಣ

ಪಕ್ಷದ ಅನ್ನ ತಿಂದು ದ್ರೋಹ ಬಗೆಯಬೇಡಿ, ತಾಕತ್ತಿದ್ದರೆ ರಾಜೀನಾಮೆ ನೀಡಿ ಹೋಗಿ: ರಾಜಣ್ಣ ಕುಟುಂಬಕ್ಕೆ ಸಚಿವ ಬಾಲಕೃಷ್ಣ ಸವಾಲು

November 3, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಟಿಪ್ಪರ್ ಲಾರಿ ಡಿಕ್ಕಿಗೆ ಮೂಡ್ಲಕಟ್ಟೆ ಕಾಲೇಜು ವಿದ್ಯಾರ್ಥಿ ಬಲಿ; ಮೂವರು ಆರೋಪಿಗಳ ಬಂಧನ

ಟಿಪ್ಪರ್ ಲಾರಿ ಡಿಕ್ಕಿಗೆ ಮೂಡ್ಲಕಟ್ಟೆ ಕಾಲೇಜು ವಿದ್ಯಾರ್ಥಿ ಬಲಿ; ಮೂವರು ಆರೋಪಿಗಳ ಬಂಧನ

November 3, 2026
ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬರಿಗೈಯಲ್ಲಿ ಬಂದಿಲ್ಲ, ₹2,328 ಕೋಟಿ ಅಭಿವೃದ್ಧಿ ಲಕ್ಷ್ಮಿ ತಂದಿದ್ದೇನೆ: ಹಿರಿಯೂರಿನಲ್ಲಿ ಸಿಎಂ ಡಿಕೆಶಿ ಘೋಷಣೆ

November 3, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper