HomeLife Styleಸದಾ ಕಾಡುವ ತಲೆನೋವಿನಿಂದ ಮುಕ್ತಿ ಬೇಕೇ? ಈ ಸಿಂಪಲ್ ಮನೆಮದ್ದು ಬಳಸಿ ಸಾಕು

ಸದಾ ಕಾಡುವ ತಲೆನೋವಿನಿಂದ ಮುಕ್ತಿ ಬೇಕೇ? ಈ ಸಿಂಪಲ್ ಮನೆಮದ್ದು ಬಳಸಿ ಸಾಕು

For Dai;y Updates Join Our whatsapp Group

Spread the love

ತಲೆನೋವು ಎಂದರೆ ತಲೆ ಅಥವಾ ಮುಖದ ಪ್ರದೇಶದಲ್ಲಿ ಉಂಟಾಗುವ ನೋವು. ತಲೆನೋವಿನ ವಿಧಗಳಲ್ಲಿ ಮೈಗ್ರೇನ್, ಒತ್ತಡ ಮತ್ತು ಕ್ಲಸ್ಟರ್ ಸೇರಿವೆ. ತಲೆನೋವು ಬಹಳ ಸಾಮಾನ್ಯ ಸಮಸ್ಯೆಯಾಗಿದ್ದು, ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಅನೇಕ ಬಾರಿ ಇದನ್ನು ಅನುಭವಿಸುತ್ತಾರೆ. ತಲೆನೋವಿನ ಮುಖ್ಯ ಲಕ್ಷಣವೆಂದರೆ,

ನಿಮ್ಮ ತಲೆ ಅಥವಾ ಮುಖದಲ್ಲಿ ನೋವು ಉಂಟಾಗುವುದು. ಹಲವಾರು ರೀತಿಯ ತಲೆನೋವುಗಳಿವೆ ಮತ್ತು ಒತ್ತಡದ ತಲೆನೋವು ಅತ್ಯಂತ ಸಾಮಾನ್ಯವಾಗಿದೆ. ಇಂತಹ ಅನೇಕ ಸಮಸ್ಯೆಗಳಿಗೆ ಮನೆ ಮದ್ದಿನಿಂದ ಪರಿಹಾರ ಕಂಡುಕೊಳ್ಳಬಹುದು. ಇವು ಆರೋಗ್ಯಕ್ಕೆ ಹಾನಿಯಾಗದಂತೆ ತಲೆ ನೋವಿಗೆ ಪರಿಹಾರ ನೀಡುತ್ತವೆ. ಹಾಗಾದರೆ ಆ ಮನೆಮದ್ದುಗಳು ಯಾವುದು? ಇಲ್ಲಿದೆ ಮಾಹಿತಿ.

-ದೈಹಿಕ ಉಷ್ಣಾಂಶ ಅಥವಾ ಪಿತ್ತದ ಪ್ರಭಾವದಿಂದ ತಲೆ ನೋವು ಕಾಣಿಸಿಕೊಂಡರೆ ನೀವು ಮಜ್ಜಿಗೆ ಅಥವಾ ಎಳನೀರು ಕುಡಿಯುವುದು ಅಥವಾ ನಿಮ್ಮ ಮನೆಯಲ್ಲಿ ಹರಳೆಣ್ಣೆ ಇದ್ದರೆ ಅದನ್ನು ನೆತ್ತಿಯ ಭಾಗಕ್ಕೆ ಮತ್ತು ಪಾದಗಳಿಗೆ ಹಚ್ಚುವುದರಿಂದ ತಲೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

– ಇನ್ನು ಪದೇ ಪದೇ ತಲೆನೋವು ಬಂದಾಗಲೆಲ್ಲಾ ನೀವು ತುಳಸಿ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕುದಿಸಿ. ಇದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ತಲೆ ನೋವು ಕಡಿಮೆಯಾಗುತ್ತದೆ. ಈ ವಿಧಾನವನ್ನು ಪ್ರತಿ ಬಾರಿಯೂ ಮಾಡುವುದರಿಂದ, ತಲೆ ನೋವು ಬಿಟ್ಟು ಬಿಟ್ಟು ಬರುವುದಿಲ್ಲ.

ಇದಕ್ಕೆ ಮತ್ತೊಂದು ಅದ್ಭುತ ಪರಿಹಾರವೆಂದರೆ ಲವಂಗ. ಇದನ್ನು ನೀವು, ಬಾಣಲೆಯಲ್ಲಿ ಸ್ವಲ್ಪ ಬಿಸಿ ಮಾಡಿ ನಂತರ ಈ ಬಿಸಿ ಲವಂಗದ ಮೊಗ್ಗುಗಳನ್ನು ಒಂದು ಸ್ವಚ್ಛವಾದ ಕರವಸ್ತ್ರದಲ್ಲಿ ಕಟ್ಟಿಕೊಂಡು ಸ್ವಲ್ಪ ಸಮಯದವರೆಗೆ ಇದರ ಪರಿಮಳವನ್ನು ಆಸ್ವಾದಿಸಿ. ಈ ರೀತಿ ಮಾಡುವುದರಿಂದ ತಲೆನೋವು ಬಹು ಬೇಗ ನಿವಾರಣೆಯಾಗುತ್ತದೆ. ಇದನ್ನು ಚಿಕ್ಕ ಮಕ್ಕಳಿಗೂ ಮಾಡಿಸಬಹುದು. ಅದಲ್ಲದೆ ಲವಂಗ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಮಾಡಿ ಆ ಮಿಶ್ರಣವನ್ನು ಹಣೆಗೆ ಹಚ್ಚುವುದರಿಂದ ಮತ್ತು ಲವಂಗ ಉಪ್ಪನ್ನು ಜಜ್ಜಿ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ತಲೆ ನೋವು ಶಮನವಾಗುತ್ತದೆ.

-ನೀವು ಕರಿಮೆಣಸು ಮತ್ತು ಪುದೀನ ಸೇರಿಸಿ, ಚಹಾ ತಯಾರಿಸಿ ಕುಡಿಯುವುದರಿಂದ ಕೂಡ ತಲೆನೋವಿನಿಂದ ಮುಕ್ತಿ ಪಡೆಯಬಹುದು. ಅಥವಾ ನೀವು ಪ್ರತಿದಿನ ಮಾಡಿಕೊಳ್ಳುವ ಚಹಾದ ಕಣ್ಣಿಗೆ ಕೆಲವು ಪುದೀನ ಎಲೆಗಳು ಮತ್ತು ಕರಿಮೆಣಸಿನ ಪುಡಿಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ, ಕುಡಿಯಬಹುದು.

– ವೀಳ್ಯದ ಎಲೆಗಳನ್ನು ಯಾವುದೇ ಮಿಶ್ರಣವಿಲ್ಲದೇ ಸೇವಿಸದುವುದರಿಂದ ಕೂಡ ತಲೆ ನೋವು ಕಡಿಮೆಯಾಗುತ್ತದೆ. ಇದು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ.

-ಬೆಳಿಗ್ಗೆ ಅಥವಾ ರಾತ್ರಿ ಅಥವಾ ಎರಡು ಬಾರಿ 6- 7 ಒಣದ್ರಾಕ್ಷಿ ಸೇವಿಸುವುದರಿಂದ ಪದೇ ಪದೇ ಬರುವ ತಲೆ ನೋವು ಮಾಯವಾಗುತ್ತದೆ. ಇದನ್ನು ಬಿಡದೇ ಪ್ರತಿದಿನ ಒಂದು ತಿಂಗಳು ಮಾಡಬೇಕು. ಅದಲ್ಲದೆ ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಕೆಲವೊಮ್ಮೆ ಜೀರ್ಣ ಶಕ್ತಿ ಆಗದಿದ್ದಾಗಲೂ ತಲೆ ನೋವು ಕಾಣಿಸಿಕೊಳ್ಳುತ್ತದೆ.

– ಇನ್ನೊಂದು ಸರಳ ಮನೆ ಮದ್ದೇನೆಂದರೆ ಒಂದು ಲೋಟದಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದು ತಲೆನೋವಿಗೆ ಪರಿಹಾರ ನೀಡುತ್ತದೆ. ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ಆಗಿ ತಲೆನೋವು ಕಾಣಿಸಿಕೊಳ್ಳುತ್ತದೆ ಹಾಗಾಗಿ ಇದನ್ನು ಕಡಿಮೆ ಮಾಡಲು ನಿಂಬೆ ರಸ ಮತ್ತು ಬೆಚ್ಚಗಿನ ನೀರು ತುಂಬಾ ಉಪಯುಕ್ತವಾಗಿದೆ.

-ತುಳಸಿ ಮತ್ತು ಶುಂಠಿಯು ತಲೆ ನೋವು ದೂರ ಮಾಡಲು ಇರುವ ಉತ್ತಮ ಸಾಮಗ್ರಿಗಳಾಗಿವೆ. ಇವೆರಡನ್ನೂ ಬಳಸಿ ತಲೆ ನೋವು ಕಡಿಮೆ ಮಾಡಿಕೊಳ್ಳಬಹುದು. ತುಳಸಿ ಎಲೆ ಮತ್ತು ಶುಂಠಿಯ ರಸವನ್ನು ಮಿಶ್ರಣ ಮಾಡಿ. ನಂತರ ಅದನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದನ್ನು ನೀವು ಸೇವಿಸಲೂಬಹುದು. ಆದರೆ ತಲೆಗೆ ಹಚ್ಚುವುದರಿಂದ ಹೆಚ್ಚಿನ ಫಲಿತಾಂಶ ದೊರೆಯುತ್ತದೆ.

-ಇದೆಲ್ಲದರ ಜೊತೆಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದೆಂದರೆ ಹುಣಸೆ ಬೀಜವನ್ನು ತೈದು ಹಣೆಗೆ ಹಚ್ಚಿಕ್ಕೊಳುವುದು. ಇದು ನಿಮಗೆ ಅತೀ ವೇಗವಾಗಿ ತಲೆ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!