ವಿಜಯಸಾಕ್ಷಿ ಸುದ್ದಿ, ಗದಗ : ರಾಜೀವಗಾಂಧಿ ನಗರದ ನವನಗರ ಕ್ಷೇಮಾಭಿವೃದ್ಧಿ ಸಂಘ (ಕೆ.ಎಚ್.ಬಿ.) ಕಾಲೋನಿ ಗದಗ ಇವರ ಆಶ್ರಯದಲ್ಲಿ ಶೀಗಿ ಹುಣ್ಣಿಮೆ ನಿಮಿತ್ತ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಶ್ರೀ ಬಸವೇಶ್ವರ ಉದ್ಯಾನವನದಲ್ಲಿ ಶೀಗಿಹುಣ್ಣಿಮೆಯನ್ನು ಆಚರಿಸಿದರು.
ಇದೇ ಸಂದರ್ಭದಲ್ಲಿ ಗದಗ ಚೇಂಬರ್ ಆಫ್ ಕಾಮರ್ಸ್ನ ನೂತನ ಅಧ್ಯಕ್ಷರಾದ ತಾತನಗೌಡ ಪಾಟೀಲ, ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಹಾಗೂ ಗದಗ-ಬೆಟಗೇರಿ ವಿರೋಧ ಪಕ್ಷದ ನಾಯಕರಾದ ಎಲ್.ಡಿ. ಚಂದಾವರಿ ಇವರಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಣಾಧಿಕಾರಿಗಳ ಐ.ಬಿ. ಬೆನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಕಾಲೋನಿಯ ಅಧ್ಯಕ್ಷ ಡಿ.ಎಸ್. ತಳವಾರ, ಮಹಾಂತಯ್ಯ ಕಲ್ಮಠ ಸೇರಿದಂತೆ ಬಡಾವಣೆಯ 300 ಜನರ ಪಾಲ್ಗೊಂಡು ಶೀಗೀಹುಣ್ಣೆಮೆಯ ಬೆಳಂದಿಗಳ ಊಟವನ್ನು ಸವಿದು ಶೀಗಿಹುಣ್ಣಿಮೆಯ ಸಂಭ್ರಮದಲ್ಲಿ ಭಾಗಿಯಾದರು.



