ಬೆಂಗಳೂರು: ಸತತ 4 ತಿಂಗಳಿಂದ ಜೈಲಿನಲ್ಲಿರೋ ನಟ ದರ್ಶನ್ ಹೈರಾಣಾಗೋಗಿದ್ದಾರೆ. ಜಾಮೀನು ಸಿಕ್ರೆ ಸಾಕು ಅಂತ ಚಾತಕ ಪಕ್ಷಿಯಂತೆ ಕಾಯ್ತಾ ಕೂತಿದ್ದಾರೆ.. ದರ್ಶನ್ ಬೇಲ್ ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಸಿಗದ ಹಿನ್ನೆಲೆ ನಟ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಬೇಲ್ಗಾಗಿ ಅರ್ಜಿ ಹಾಕಿದ್ದರು. ಅಕ್ಟೋಬರ್ 22ರಂದು ಹೈಕೋರ್ಟ್ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು.
ಬಳಿಕ ಅಕ್ಟೋಬರ್ 28ಕ್ಕೆ ಬೇಲ್ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ನಿನ್ನೆ ಹೈಕೋರ್ಟ್ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಯವರ ಪೀಠ ದರ್ಶನ್ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡಿತು… ದರ್ಶನ್ ಪರ ವಕೀಲರು ಆರೋಪಿಗೆ ತೀವ್ರತರದ ಆರೋಗ್ಯ ಸಮಸ್ಯೆಗಳಿರುವುದರಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ರು.
ಈ ಬಗ್ಗೆ ಆರೋಪಿ ದರ್ಶನ್ ನ ಮೆಡಿಕಲ್ ರಿಪೋರ್ಟ್ ಕೋರ್ಟ್ ಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಅಧಿಕಾರಿಗಳಿಗೆ ಸೂಚಿಸಿದ್ರು. ಅದರಂತೆ ನಟ ದರ್ಶನ್ ನ ಮೆಡಿಕಲ್ ರಿಪೋರ್ಟ್ಸ್ ಅನ್ನು ಇಂದು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಿದ್ರು… ಈ ವೇಳೆ ಸರ್ಕಾರದ ಪರ ಹಾಜರಿದ್ದ ಎಸ್ಪಿಪಿ ಪ್ರಸನ್ನ ಕುಮಾರ್ ನಮಗೆ ಮೆಡಿಕಲ್ ರಿಪೋರ್ಟ್ ಕಾಪಿ ಸಿಕ್ಕಿಲ್ಲದ್ದರಿಂದ ಆರೋಪಿಗೆ ತಕ್ಷಣ ಜಾಮೀನು ಮಂಜೂರು ಮಾಡಬಾರದು ಎಂದು ಆಕ್ಷೇಪಿಸಿದರು.
ನಮಗೆ ರಿಪೋರ್ಟ್ ಸಿಕ್ಕ ಕೋಡಲೆ ಆಕ್ಷೇಪನೆ ಸಲ್ಲಿಸುವುದಾಗಿ ತಿಳಿಸಿದ್ರು. ಎಲ್ಲರಿಗೂ ಮೆಡಿಕಲ್ ರಿಪೋರ್ಟ್ ಪ್ರತಿಗಳನ್ನು ನೀಡಲು ಸೂಚಿಸಿದ ನ್ಯಾಯಮೂರ್ತಿಗಳು ಜಾಮೀನು ಅರ್ಜಿಯನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಿ ಆದೇಶ ಮಾಡಿದ್ರು. ಸದ್ಯಕ್ಕೆ ಇಂದು ಸರ್ಕಾರದ ಪರ ಎಸ್ಪಿಪಿ ಪ್ರಸನ್ನಕುಮಾರ್ ದರ್ಶನ್ ಜಾಮೀನು ಅರ್ಜಿಗೆ ಏನೆಲ್ಲಾ ಆಕ್ಷೇಪಣೆ ಮಂಡಿಸಲಿದ್ದಾರೆ ಅನ್ನೋದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ… ಇಂದು ದರ್ಶನ್ ಗೆ ಜಾಮೀನಿನ ಲಕ್ ಇದ್ಯಾ ಕಾದುನೋಡಬೇಕಿದೆ…