ಕಲಬುರ್ಗಿ:- ಜಿಲ್ಲೆಯ ಸೇಡಂ ತಾಲ್ಲೂಕಿನ ಹೂಡಾ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮಗು ದುರ್ಮರಣ ಹೊಂದಿದ್ದು, ಹಲವರು ಅಸ್ವಸ್ಥ ಆಗಿರುವ ಘಟನೆ ಜರುಗಿದೆ.
Advertisement
5 ವರ್ಷದ ಮಮತಾ ಹಣಮಂತ ಜೋಗುರ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಹೂಡಾ ಗ್ರಾಮಕ್ಕೆ ಪೂರೈಕೆಯಾದ ನೀರು ಕುಡಿದು ಅಸ್ವಸ್ಥರಾಗಿ ಅನೇಕರು ವಾಂತಿ ಬೇಧಿಯಿಂದ ಬಳಲುತ್ತಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀಬಾಯಿ, ಐವರು ಮಕ್ಕಳು ಸೇರಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಸ್ವಸ್ಥರು ಮಳಖೇಡ ಸರ್ಕಾರಿ ಆಸ್ಪತ್ರೆ ಮತ್ತು ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.