ನಮ್ಮ ಪಕ್ಷ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ: ಶಾಸಕ ವಿನಯ್ ಕುಲಕರ್ಣಿ

0
Spread the love

ಹಾವೇರಿ: ವಕ್ಫ್​ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ, ಅದಲ್ಲದೆ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ  ಎಂದು ಶಾಸಕ ವಿನಯ್​ ಕುಲಕರ್ಣಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಕ್ಫ್​ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ನೋಟಿಸ್ ಹಿಂಪಡೆಯುವ ಕೆಲಸ ಈಗಾಗಲೇ ಆಗಿದೆ. ನಾವೂ ರೈತರೇ, ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಈ ವಿಚಾರದಲ್ಲಿ ನಮ್ಮ ಪಕ್ಷ ಕೂಡಾ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

Advertisement

ಚುನಾವಣೆ ಬಂದ ಸಂದರ್ಭದಲ್ಲಿ ಯಾವುದೇ ಅಸ್ತ್ರ ಇರಲ್ಲ. ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಅವರಿಗೆ ಆಗಲ್ಲ, ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ನೇಹಾ ಹಿರೇಮಠ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡರು. ಇಲ್ಲದಿದ್ದರೆ ನಮ್ಮ ವಿನೋದ್​ ಅಸೂಟಿ ಗೆದ್ದು ಸಂಸದರಾಗುತ್ತಿದ್ದರು. ವಕ್ಫ್​ ಗೆಜೆಟ್​ ನೋಟಿಫಿಕೇಷನ್​ ರದ್ದು ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here