ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಕೆಎಂಎಫ್ ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯಾದ್ಯಂತ ಹೋಟೆಲ್ಗಳಲ್ಲಿ ಕಾಫಿ ಮತ್ತು ಟೀ ಬೆಲೆಯನ್ನು ಏರಿಕೆ ಮಾಡಲಾಗಿದೆ. ಒಂದು ಕಪ್ ಕಾಫಿ ಅಥವಾ ಟೀ ಬೆಲೆಯಲ್ಲಿ ಬರೋಬ್ಬರಿ 5 ರೂಪಾಯಿ ಹೆಚ್ಚಳವಾಗಿದೆ.
ಈ ಹಿಂದೆ 15 ರೂಪಾಯಿ ಇದ್ದ ಮಿನಿ ಕಾಫಿ ಮತ್ತು ಟೀ ಬೆಲೆ ಇದೀಗ 20 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 20 ರೂಪಾಯಿ ಇದ್ದ ಪೂರ್ಣ ಕಪ್ ಕಾಫಿ ಮತ್ತು ಟೀ ಬೆಲೆ 25 ರೂಪಾಯಿಗೆ ತಲುಪಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಹೋಟೆಲ್ಗಳಲ್ಲಿ ಪರಿಷ್ಕೃತ ದರ ಜಾರಿಗೆ ಬಂದಿದೆ.
ಇತ್ತೀಚೆಗೆ ಕೆಎಂಎಫ್ ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ಹೋಟೆಲ್ಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕಾಫಿ ಮತ್ತು ಟೀ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರು ಈ ಹಿಂದೆ ತಿಳಿಸಿದ್ದರು.
ಒಟ್ಟಿನಲ್ಲಿ ಹಾಲಿನ ದರ ಏರಿಕೆಯ ಪರಿಣಾಮ ಇದೀಗ ಹೋಟೆಲ್ಗಳ ಕಾಫಿ ಮತ್ತು ಟೀ ದರದ ಮೇಲೂ ಬಿದ್ದಿದ್ದು, ಪ್ರತಿದಿನ ಕಾಫಿ-ಟೀ ಕುಡಿಯುವ ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದೆ.









