ವಿಜಯಸಾಕ್ಷಿ ಸುದ್ದಿ, ಗದಗ : ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವಾಯ್. ವಿಜೇಯೇಂದ್ರ ಅವರ 49ನೇ ಜನ್ಮ ದಿನವನ್ನು ಗದಗ ನಗರದ ಪಂಚಾಕ್ಷರಿ ಗವಾಯಿಗಳ ಆಶ್ರಮದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಚರಿಸಲಾಯಿತು.
ಪೂಜ್ಯ ಕಲ್ಲಯ್ಯಜ್ಜನವರು ದೂರವಾಣಿ ಮೂಲಕ ವಿಜೇಂದ್ರರರಿಗೆ ಶುಭಾಶಯಗಳನ್ನು ತಿಳಿಸಿ ಆಶೀರ್ವದಿಸಿದರು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಧೀರ ಕಾಟಿಗರ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ, ಹಿರಿಯರಾದ ಎಂ.ಎಸ್. ಕರೀಗೌಡ್ರ, ಜಗನ್ನಾಥಸಾ ಭಾಂಡಗೆ, ರವಿ ದಂಡಿನ, ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಪ್ರಕೋಷ್ಠಗಳ ಸಂಯೋಜಕ ಶಶಿಧರ ದಿಂಡೂರ, ದೇವೇಂದ್ರಪ್ಪ ಹೂಗಾರ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ಅವಿನಾಶ ಹೊನಗುಡಿ, ಕುಮಾರ ಮಾರನಬಸರಿ, ರಾಜು ಅಬ್ಬಿಗೇರಿ, ರವಿ ಚವ್ಹಾಣ ಮುಂತಾದವರಿದ್ದರು.
Advertisement