ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಹುಬ್ಬಳ್ಳಿಯ ರಸ್ತೆಯ ವಿಠ್ಠಲಾರೂಢ ಸಮುದಾಯ ಭವನದಲ್ಲಿ ಗದಗ-ಬೆಟಗೇರಿ ಎಸ್ಎಸ್ಕೆ ಸಮಾಜದ ವತಿಯಿಂದ ಇದೇ ನ. 8ರಂದು ಬೆಳಿಗ್ಗೆ 10.30 ಗಂಟೆಗೆ ಜಂಟಿಯಾಗಿ ಬೈಕ್ ರ್ಯಾಲಿ ಹಾಗೂ ಸಂಜೆ 4.30 ಗಂಟೆಗೆ ಗದಗ ಎಸ್ಎಸ್ಕೆ ಸಮಾಜದ ವತಿಯಿಂದ ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಆಚರಿಸಲು ಬುಧವಾರ ಜರುಗಿದ ಪೂರ್ವಬಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಹಸ್ರಾರ್ಜುನ ಮಹಾರಾಜ ಜಯಂತಿ ಉತ್ಸವ ಸಮಿತಿಯ ಚೇರಮನ್ ಸಾಗರ ಪವಾರ ಮಾತನಾಡಿ, ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ನ.7ರಂದು ಸಂಜೆ 6.30 ಗಂಟೆಗೆ ಗದಗ ನಗರದ ಹಳೇ ಸರಾಫ್ ಬಜಾರ್ನಲ್ಲಿರುವ ಜಗದಂಬಾ ದೇವಸ್ಥಾನದ ಹತ್ತಿರ ರಾಜಕುಮಾರ ಮೆಲೋಡಿ ಇವೆಂಟ್ಸ್ ಹಾಗೂ ಹೆಸರಾಂತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯುವದು. ನ.8ರಂದು ಬೆಳಿಗ್ಗೆ 9.30 ಗಂಟೆಗೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಮಹಿಳಾ ಮಂಡಳದ ಅಧ್ಯಕ್ಷೆ ಉಮಾ ಬೇವಿನಕಟ್ಟಿ ಹಾಗೂ ಸಮಾಜ ಬಾಂಧವರಿಂದ ಸಹಸ್ರಾರ್ಜುನ ಮಹಾರಾಜರ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ಜರುಗುವದು.
ಬೆಳಿಗ್ಗೆ 10.30 ಗಂಟೆಗೆ ಹುಡ್ಕೋ ಅಂಬಾಭವಾನಿ ದೇವಸ್ತಾನದಿಂದ ಬೈಕ್ ರ್ಯಾಲಿ ಜರುಗುವದು. ಸಂಜೆ 4.30 ಗಂಟೆಗೆ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಅಂಗವಾಗಿ ಬೆಳ್ಳಿ ಮೂರ್ತಿ ಹಾಗೂ ಬೃಹತ್ ಭಾವಚಿತ್ರದ ಮೆರವಣಿಗೆ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರು ಭಾಗವಹಿಸುವರು ಎಂದು ಹೇಳಿದರು.
ಫಕೀರಸಾ ಬಾಂಡಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ವಿಶ್ವನಾಥಸಾ ಸೂಳಂಕಿ, ಬೆಟಗೇರಿ ಸಮಾಜದ ದಸರಾ ಕಮಿಟಿಯ ಚೇರಮನ್ರಾದ ಸುರೇಶ ಮೇರವಾಡೆ, ಹೀರಾಸಾ ಬಾಕಳೆ ಉಪಸ್ಥಿತರಿದ್ದರು.
ಎನ್.ಆರ್. ಖಟವಟೆ, ಸುರೇಶಕುಮಾರ ಬದಿ, ಮಾರುತಿ ಪವಾರ, ಅನಿಲ್ ಖಟವಟೆ, ಶ್ರೀನಿವಾಸ ಬಾಂಡಗೆ, ಗಣಪತಿ ಜಿತೂರಿ, ಗಂಗಾಧರ ಹಬೀಬ, ಮಾಧೂಸಾ ಬದಿ, ಮೋಹನ ಪವಾರ, ಪ್ರದೀಪ ಖಟವಟೆ, ಸುಧೀರ ಕಾಟಿಗರ, ಆರ್.ಟಿ. ಕಬಾಡಿ, ರಾಮಚಂದ್ರ ಶಿದ್ಲಿಂಗ, ಭೀಮಾ ಕಾಟಿಗರ, ಬಾಬು ಬಾಕಳೆ ಮುಂತಾದವರು ಪಾಲ್ಗೊಂಡಿದ್ದರು. ಕಿಶನ ಮೇರವಾಡೆ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಶ್ರೀಕಾಂತ ಬಾಕಳೆ ವಂದಿಸಿದರು.
ಸಭೆಯಲ್ಲಿ ಗದಗ ಎಸ್ಎಸ್ಕೆ ಸಮಾಜದ ಪಂಚ ಕಮಿಟಿಯ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಮಾತನಾಡಿ, ಬೈಕ್ ರ್ಯಾಲಿಯಲ್ಲಿ ಸಮಾಜ ಬಾಂಧವರು ಶಿಸ್ತುಬದ್ಧವಾಗಿ ಪಾಲ್ಗೊಳ್ಳಬೇಕು. ಜೊತೆಗೆ ಶಿಸ್ತು ಮತ್ತು ಕಾನೂನು ಪಾಲನೆ ಮಾಡುವದರೊಂದಿಗೆ ಸಹಸ್ರಾರ್ಜುನ ಮಹಾರಾಜರ ಘೋಷಣೆ ಮಾಡುತ್ತ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿ, ಇತರೆ ಸಮಾಜದವರಿಗೆ ಮಾದರಿಯಾಗಬೇಕೆಂದು ಹೇಳಿದರು.



