ಯಶವಂತಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!

0
Spread the love

ಬೆಂಗಳೂರು:- ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಆಗಿರುವ ಘಟನೆ ಯಶವಂತಪುರ ಫ್ಲೈಓವರ್‌ ಮೇಲೆ ಜರುಗಿದೆ.

Advertisement

ಕೂದಲೆಳೆ ಅಂತರದಲ್ಲಿ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಸಂಜಯ್‌ನಗರದಿಂದ ರಾಜಾಜಿನಗರಕ್ಕೆ ಯುವಕರು ವಾಪಸ್‌ ಆಗುತ್ತಿದ್ದ ವೇಳೆ ತಡರಾತ್ರಿ ಅಪಘಾತ ಸಂಭವಿಸಿದೆ.

ಕ್ರೇಟಾ ಕಾರು ಯಶವಂತಪುರ ಮಾರ್ಗವಾಗಿ ವೇಗವಾಗಿ ಬರುತ್ತಿತ್ತು. ಈ ವೇಳೆ ಕಾರು ಫ್ಲೈಓವರ್‌ ಮೇಲೆ ನಿಯಂತ್ರಣ ತಪ್ಪಿದೆ. ವೇಗವಾಗಿ ಡಿವೈಡರ್ ಹತ್ತಿ ಕಂಟ್ರೋಲ್ ತಪ್ಪಿ ಪಲ್ಟಿಯಾಗಿದೆ.

ಕೂಡಲೇ ಸ್ಥಳದಲ್ಲಿದ್ದ ಕೆಲ ಆಟೋ ಚಾಲಕರು ಕಾರಿನ ಒಳಗಿದ್ದ ಯುವಕರನ್ನ ಆಚೆ ಕರೆತಂದಿದ್ದಾರೆ. ಯುವಕರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ. ಯಶವಂತಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

LEAVE A REPLY

Please enter your comment!
Please enter your name here