ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಯುವ ಪರ್ವತಾರೋಹಕಿ ಸೃಷ್ಟಿ ಮೇಟಿ ಅವರು ಸುಮಾರು 15,500 ಮೀಟರ್ ಎತ್ತರದ ಹರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಿ ಮಾಜಿ ಸಚಿವ ಬಿ.ಆರ್. ಯಾವಗಲ್ಲ ಅವರು ಮಾತನಾಡಿದರು.
“ಸಾಧನೆಗೆ ಪುರುಷ–ಮಹಿಳೆ ಎಂಬ ಭೇದವಿಲ್ಲ. ಗುರಿ ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಇದ್ದರೆ ಯಾವುದೇ ಶಿಖರವನ್ನೂ ಏರಬಹುದು” ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಯುವ ಪರ್ವತಾರೋಹಕಿ ಸೃಷ್ಟಿ ಮೇಟಿ ಅವರು ಸುಮಾರು 15,500 ಮೀಟರ್ ಎತ್ತರದ ಹರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಸೃಷ್ಟಿ ಅವರ ಸಾಧನೆ ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಗುರಿ ಸಾಧಿಸಲು ಸಮಾಜದ ಬೆಂಬಲವೂ ಅಗತ್ಯವಾಗಿದೆ. ಪರ್ವತಾರೋಹಣದ ಅನುಭವಗಳನ್ನು ದಾಖಲಿಸಿಕೊಳ್ಳುವಂತೆ ಸಲಹೆ ನೀಡಿದರು.
ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ, ಮಾಜಿ ತಾಪಂ ಸದಸ್ಯ ಮಲ್ಲಣ್ಣ ಮೇಟಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ ಸೃಷ್ಟಿ ಅವರ ಸಾಧನೆಯನ್ನು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿದ ಸೃಷ್ಟಿ ಮೇಟಿ ಅವರು ಹರ್ರಾ ಟಾಪ್ ಶಿಖರ ಏರಿದ ಅನುಭವ, ತರಬೇತಿ ಹಾಗೂ ಎದುರಾದ ಸವಾಲುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಉಮೇಶ ಮೇಟಿ, ಹೇಮಾ ಮೇಟಿ, ಮೇಟಿ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

