ರಾಯಚೂರು: ಬಾಲಿವುಡ್ ನಟ ಸಲ್ಮಾನ್ ಖಾನ್ʼಗೆ ಜೀವಬೆದರಿಕೆಯೊಡ್ಡಿರುವ ಅರೋಪದಲ್ಲಿ ಮುಂಬೈ ಪೊಲೀಸರು ಜಿಲ್ಲೆಯ ಮಾನ್ವಿ ಪಟ್ಟಣದ ನಿವಾಸಿ ಸೊಹೇಲ್ ಪಾಶಾನನ್ನು ವಶಕ್ಕೆ ಪಡೆದು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸರ ನೆರವಿನಿಂದ ಸೊಹೇಲ್ ನನ್ನು ಬಂಧಿಸಲಾಗಿದೆ.
ನವೆಂಬರ್ 11ರಂದು ಆರೋಪಿಯನ್ನ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿದೆ. ಮುಂಬೈ ವರ್ಲಿ ಪೊಲೀಸ್ ಠಾಣೆಯಿಂದ ಆರೋಪಿ ಪೋಷಕರಿಗೆ ಇಂದು ಕರೆ ಬಂದಿದ್ದು ವಿಚಾರಣೆಗೆ ಮುಂಬೈಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಇದೀಗ ಮಗನ ಬಂಧನದಿಂದ ಬಡ ಕುಟುಂಬ ಕಣ್ಣೀರಿಡುತ್ತಿದೆ.ಸಲ್ಮಾನ್ ಖಾನ್ ಅಪ್ಪಟ ಅಭಿಮಾನಿಯಾಗಿದ್ದ ಸೋಹೆಲ್ ಪಾಶಾ,
ಬಹುಬೇಗ ಹೆಸರು ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿ ವಾಟ್ಸ್ಆಪ್ ನಂಬರ್ಗೆ ನ.7ರಂದು ಕೊಲೆ ಬೆದರಿಕೆ ಮೆಸೇಜ್ ಮಾಡಿದ್ದ, 5 ಕೋಟಿ ಬೇಡಿಕೆ ಇಟ್ಟಿದ್ದ. ಬೇರೆಯವರ ಮೊಬೈಲ್ ನಂಬರ್ ಬಳಸಿ ವಾಟ್ಸ್ ಆಪ್ ಮೆಸೇಜ್ ಮಾಡಿದ್ದ ಸೋಹೆಲ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಗ ಮಾಡಿದ ತಪ್ಪಿಗೆ ಪೋಷಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.