ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಜ್ಞಾನಕ್ಕೆ ನಿಲುಕದ, ನಮ್ಮ ತರ್ಕಕ್ಕೆ ಸಿಗದ ಅದೃಶ್ಯ ಶಕ್ತಿಯೊಂದು ನಮ್ಮನ್ನೂ ಸೇರಿದಂತೆ ಈ ಜಗತ್ತನ್ನು ನಡೆಸುತ್ತಿರುತ್ತದೆ. ಅದರ ಕುರಿತು ನಾವೆಲ್ಲ ವಿನಮ್ರರಾಗಿರಬೇಕು ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.
ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ ೧೩ನೇ ದಿನದ ಪ್ರವಚನ ನೀಡಿ ಮಾತನಾಡುತ್ತಿದ್ದರು.
ಸಾತ್ವಿಕ ತಪಸ್ಸಿನಿಂದ ದೇವರ ದಿವ್ಯ ಆಶೀರ್ವಾದಕ್ಕೆ ಪಾತ್ರರಾಗಬಹುದೇ ವಿನಃ ನಾವೇ ದೇವರಾಗಲು ಸಾಧ್ಯವಿಲ್ಲ. ಮೈಮೇಲೆ ದೇವರು ಬರುವುದು ಇಂಥ ಎಲ್ಲ ಕುರುಡು ನಂಬಿಕೆಗಳನ್ನು ನಂಬುವ ಮುನ್ನ ಪ್ರಜ್ಞಾವಂತರಾಗಿ ಯೋಚಿಸಬೇಕು. ಭಗವದ್ಗೀತೆಯ ಪ್ರವಚನಗಳು ತಾತ್ವಿಕ ನೆಲೆಗಟ್ಟಿನಲ್ಲಿ ನಡೆಯುವ ಕಾರಣ, ಇದು ಕೆಲವರಿಗೆ ಕುತೂಹಲಕಾರಿ ಎನಿಸದೇ ಇರಬಹುದು. ಆದಾಗ್ಯೂ ಗದುಗಿನಲ್ಲಿ ಭಗವದ್ಗೀತಾ ಪ್ರವಚನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿರುವದು ಶ್ಲಾಘನೀಯ ಎಂದರು.
ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಎಸ್.ಎಸ್. ಶೆಟ್ಟರ್, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.