ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ತಂದೆ ವಿಧಿವಶ!

0
Spread the love

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್​ ಪ್ರಭು ವಿಧಿವಶರಾಗಿದ್ದಾರೆ.

Advertisement

ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಸಮಂತಾ ಅವರು, ಮತ್ತೆ ನಾವು ಸಿಗವವರೆಗೆ ಅಪ್ಪ..’ ಎಂದು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಜೊತೆಗೆ, ಒಡೆದ ಹೃದಯದ ಎಮೋಜಿ ಬಳಸಿದ್ದಾರೆ. ಈ ಮೂಲಕ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರ ಕುಟುಂಬದಲ್ಲಿ ಶೋಕ ಆವರಿಸಿದೆ.

ಸಮಂತಾ ತಂದೆ ಜೋಸೆಫ್​ ಪ್ರಭು ಅವರು ತೆಲುಗು ಆಂಗ್ಲೋ ಇಂಡಿಯನ್ ಆಗಿದ್ದರು. ಸಮಂತಾ ಯಶಸ್ಸಿನಲ್ಲಿ ತಂದೆಯ ಕೊಡುಗೆ ಪ್ರಮುಖವಾಗಿತ್ತು. ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನ ಏಳು-ಬೀಳಿನಲ್ಲಿ ಸಮಂತಾಗೆ ಅವರ ತಂದೆ ಬೆಂಬಲವಾಗಿ ನಿಂತಿದ್ದರು. ತಂದೆಯನ್ನು ಕಳೆದುಕೊಂಡ ಸಮಂತಾ ಅವರಿಗೆ ಸಾಕಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here