HomeGadag Newsಮನೆ ನಿರ್ಮಾಣಕ್ಕೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ

ಮನೆ ನಿರ್ಮಾಣಕ್ಕೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮುಂಡರಗಿ ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಹಾಗೂ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಆಶ್ರಯ ಮನೆ ನಿರ್ಮಾಣಕ್ಕೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವೇದಿಕೆಯ ಸಂಚಾಲಕ ಬಸವರಾಜ ಯಲ್ಲಪ್ಪ ನವಲಗುಂದ ಮಾತನಾಡುತ್ತಾ, ಮುಂಡರಗಿ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಶಿರೋಳ ಗ್ರಾಮದ ರಿ.ಸ.ನಂ. 24ರ 25 ಎಕರೆ 32 ಗುಂಟೆ ಕೃಷಿ ಜಮೀನಿನಲ್ಲಿ ಇರುವ 1008 ವಿನ್ಯಾಸಗಳಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಸತಿ ಆವಾಸ ಯೋಜನೆಯ ಅನುದಾನದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು ಇವರು ಡಾ. ಬಿ.ಆರ್. ಅಂಬೆಡ್ಕರ್ ವಸತಿ ನಿಗಮ ಕೊಳಚೆ ಪ್ರದೇಶ ವಸತಿ ಮಂಡಳಿ ವಾಂಬೆ ವಸತಿ ನಿಗಮ ಅನುದಾನದಲ್ಲಿ ಹಣ ಪಡೆದು ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳು ರಚನೆ ಮಾಡಿ ನಿವೇಶನಗಳನ್ನು ನಿರ್ಮಾಣ ಮಾಡಿ ಆಶ್ರಯ ನಿರ್ಗತಿಕರಿಗೆ ಮನೆ ಹಕ್ಕುಪತ್ರ ಹಂಚಿಕೆ ಮಾಡಬೇಕು ಎಂದು ಹಲವಾರು ಬಾರಿ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಪೂಜಾರ, ಎಚ್.ಡಿ. ಪೂಜಾರ, ಸೋಮಣ್ಣ ಹೈತಾಪೂರ, ಚಿನ್ನಪ್ಪ ವಡ್ಡಟ್ಟಿ, ಸುರೇಶ ಕುಂಬಾರ, ಮೈನುದ್ದಿನ ಗರಡಿಮನಿ, ವ್ಹಿ.ಎಸ್. ಗಟ್ಟಿ ಮುಂತಾದವರಿದ್ದರು.

ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ ಸಮ್ಮುಖದಲ್ಲಿ ಮನವಿಪತ್ರ ಸ್ವೀಕರಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!